ಮಿಸ್ಡ್ ಕಾಲ್ ನಿಂದ ಆರಂಭವಾದ ಪ್ರೀತಿ, ಅತ್ಯಾಚಾರದಲ್ಲಿ ಕೊನೆಯಾಯ್ತು! - Mahanayaka

ಮಿಸ್ಡ್ ಕಾಲ್ ನಿಂದ ಆರಂಭವಾದ ಪ್ರೀತಿ, ಅತ್ಯಾಚಾರದಲ್ಲಿ ಕೊನೆಯಾಯ್ತು!

missed call
10/07/2021

ಮೈಸೂರು: ಮಿಸ್ಡ್ ಕಾಲ್ ನಿಂದ ಆರಂಭವಾದ ಪ್ರೀತಿ, ಅತ್ಯಾಚಾರದಲ್ಲಿ ಕೊನೆಗೊಂಡ ದುರಂತ ಪ್ರಕರಣವೊಂದು  ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಿಂದ ವರದಿಯಾಗಿದೆ.

26 ವರ್ಷ ವಯಸ್ಸಿನ ಸಲಾವುದ್ದೀನ್ ಎಂಬಾತ ಅತ್ಯಾಚಾರದ ಆರೋಪ ಎದುರಿಸುತ್ತಿದ್ದು, ಈತ ನಂಜನಗೂಡು ಪಟ್ಟಣದಲ್ಲಿ ಹೋಲ್ ಸೇಲ್ ಹಣ್ಣಿನ ವ್ಯಾಪಾರಿಯಾಗಿದ್ದ ಎಂದು ಹೇಳಲಾಗಿದೆ.

ಮಿಸ್ಡ್ ಕಾಲ್ ಮೂಲಕ ಯುವತಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿತ್ತು. 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು, ಮದುವೆಯಾಗಲೂ ನಿರ್ಧರಿಸಿದ್ದರು ಎನ್ನಲಾಗಿದೆ.  ಆದರೆ ಈ ನಡುವೆ ಸಲಾವುದ್ದೀನ್ ಸಂತ್ರಸ್ತ ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೇ, ಆಕೆಯಿಂದ ಸಾಕಷ್ಟು ಹಣವನ್ನು ಕೂಡ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.

ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಸಲಾವುದ್ದೀನ್ ಇದೀಗ ಬೇರೊಂದು ಯುವತಿಯೊಂದಿಗೆ ಮದುವೆಯಾಗಿ ವಂಚಿಸಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ, ಕೊನೆ ಮಾಡುವುದಾಗಿ ಹೇಳಿದ್ದಾನೆ ಸಂತ್ರಸ್ತ ಯುವತಿ ನಂಜನಗೂಡು ಪಟ್ಟಣ ಠಾಣೆ ಪೊಲೀಸರ ಮೊರೆ ಹೋಗಿದ್ದು, ಆರೊಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅತ್ಯಾಚಾರ, ಬೆದರಿಕೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ