ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಿಥಾಲಿ ರಾಜ್
ಭಾರತೀಯ ಮಹಿಳಾ ಕ್ರಿಕೆಟ್ ನ ಬೆನ್ನೆಲುಬು ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲದ ಕ್ರಿಕೆಟ್ ವೃತ್ತಿಜೀವನದಿಂದ ಮಿಥಾಲಿ ನಿವೃತ್ತಿಯಾಗುತ್ತಿದ್ದಾರೆ.
ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಜೀವನದ ಎರಡನೇ ಇನ್ನಿಂಗ್ಸ್‌ನಲ್ಲೂ ನಿಮ್ಮ ಆಶೀರ್ವಾದವನ್ನು ಎದುರು ನೋಡುತ್ತಿದ್ದೇನೆ ಎಂದು ಮಿಥಾಲಿ ರಾಜ್ ನಿವೃತ್ತಿ ಘೋಷಿಸಿದರು.
ಮಿಥಾಲಿ 1996 ರಲ್ಲಿ 16 ನೇ ವಯಸ್ಸಿನಲ್ಲಿ ಭಾರತದ ಅಂಗಿ(ಜೇರ್ಸಿ)ಯನ್ನು ಧರಿಸಿದ್ದರು. ಇವರು ಭಾರತಕ್ಕಾಗಿ 12 ಟೆಸ್ಟ್, 232 ODI ಮತ್ತು 89 T20I ಪಂದ್ಯಗಳನ್ನು ಆಡಿದ್ದಾರೆ. ಮಿಥಾಲಿ ಭಾರತವನ್ನು ಎರಡು ವಿಶ್ವಕಪ್ ಫೈನಲ್‌ಗೆ ಮುನ್ನಡೆಸಿದರು. ಮಿಥಾಲಿ 12 ಟೆಸ್ಟ್‌ಗಳಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿದಂತೆ 699 ರನ್‌ಗಳನ್ನು ಮತ್ತು ಏಳು ODIಗಳಲ್ಲಿ ಏಳು ಶತಕಗಳು ಮತ್ತು 64 ಅರ್ಧಶತಕಗಳು ಸೇರಿದಂತೆ 7805 ರನ್ ಗಳನ್ನು ಗಳಿಸಿದ್ದಾರೆ.
ಮಿಥಾಲಿ ಟಿ20 ಕ್ರಿಕೆಟ್‌ನಲ್ಲಿ 2364 ರನ್ ಗಳಿಸಿದ್ದಾರೆ. ಮಿಥಾಲಿ ಏಕದಿನ ರನ್‌ಬೇಟೆಲ್ಲಿ ವಿಶ್ವದಲ್ಲೇ ನಂಬರ್ ಒನ್. ನಾಯಕಿಯಾಗಿ ಮಿಥಾಲಿ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆಯನ್ನೂ ಹೊಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾರತಕ್ಕೆ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದ ಅಲ್ ಖೈದಾ!
ಇಬ್ಬರು ಮಹಿಳೆಯರ ಹೊಟ್ಟೆಯಿಂದ ಕೆಳ ಭಾಗ ಕತ್ತರಿಸಿದ ಮೃತದೇಹ ಪತ್ತೆ: ಬೆಚ್ಚಿಬಿದ್ದ ಜನ
ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಯುವತಿಯ ಹತ್ಯೆ!
ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿಗೆ ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ!
ಪತ್ನಿ ರುಚಿಕರ ಅಡುಗೆ ಮಾಡಿಕೊಡುವುದಿಲ್ಲ ಎಂದು ಪತಿ ಆತ್ಮಹತ್ಯೆಗೆ ಶರಣು