ಮಿತಿ ಮೀರಿದ ಕೊರೊನಾದಿಂದ ಸಾವು ಪ್ರಕರಣ | ಮೃತದೇಹ ಸುಡುವ ಮಷೀನೇ ಸುಟ್ಟು ಹೋಯ್ತು!
18/04/2021
ಸೊಲ್ಲಾಪುರ: ಕೊರೊನಾದಿಂದ ಮೃತಪಟ್ಟವರನ್ನು ಸುಡುತ್ತಿದ್ದ ಚಿತಾಗಾರದ ಮಷೀನ್ ಸುಟ್ಟು ಹೋದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜನರದಲ್ಲಿ ನಡೆದಿದ್ದು, ಒಂದರ ಹಿಂದೊಂದರಂತೆ ಮೃತದೇಹಗಳನ್ನು ಸುಟ್ಟ ಪರಿಣಾಮ ಒತ್ತಡ ತಾಳಲಾರದೇ ಮಷೀನ್ ಸುಟ್ಟು ಹೋಗಿದೆ ಎಂದು ಹೇಳಲಾಗಿದೆ.
ಸೊಲ್ಲಾಪುರ ನಗರದಲ್ಲಿ ಕೊರೊನಾದಿಂದಾಗಿ ಪ್ರತಿನಿತ್ಯ 30ಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ನಗರದಲ್ಲಿದ್ದ ಚಿತಾಗಾರದಲ್ಲಿದ್ದ ಮಷೀನ್ ಬಿಡುವೇ ಇಲ್ಲದೇ ಚಾಲ್ತಿಯಲ್ಲಿದ್ದು, ಇದರಿಂದಾಗಿ ಚಿತಾಗಾರದ ಮಷೀನ್ ಹೊತ್ತು ಉರಿದಿದೆ ಎಂದು ಹೇಳಲಾಗಿದೆ.
ಇನ್ನೂ ಚಿತಾಗಾರ ಸುಟ್ಟು ಹೋಗಿರುವ ಹಿನ್ನೆಲೆಯಲ್ಲಿ ಹಳೆಯ ಪದ್ಧತಿಯ ಗ್ಯಾಸ್ ಘಟಕದ ಮೂಲಕ ಶವಸಂಸ್ಕಾರ ನಡೆಸಲಾಗುತ್ತಿದೆ. ಸೊಲ್ಲಾಪುರದಲ್ಲಿ ಕೊರೊನಾಕ್ಕೆ ಯುವಕ-ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.