ರೈಲ್ವೆ ಫ್ಲೈ ಓವರ್ ಬಳಿ ಸೇಫ್ ಗಾರ್ಡ್ ನಲ್ಲಿ ಸಿಕ್ಕಿ ಹಾಕಿಕೊಂಡ ಲಾರಿ!

ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಫ್ಲೈ ಓವರ್ ಬಳಿ ಸೇಫ್ ಗಾರ್ಡ್ ಗೆ ಲಾರಿ ಸಿಕ್ಕಿ ಹಾಕಿಕೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ ಮಿತ್ತೂರಿನ ಸೇಫ್ ಗಾರ್ಡ್ ಗೆ ಡಿಕ್ಕಿಯಾಗಿ ಸಿಕ್ಕಿ ಹಾಕಿಗೊಂಡಿದ್ದು, ಪರಿಣಾಮವಾಗಿ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.
ಮಿತ್ತೂರಿನಲ್ಲಿ ರೈಲ್ವೇ ಮೇಲ್ಸೇತುವೆಯನ್ನು ಪ್ರವೇಶಿಸುವ ಹಾಗೂ ನಿರ್ಗಮಿಸುವ ಎರಡೂ ಬದಿಗಳಲ್ಲೂ ಸೇಫ್ ಗಾರ್ಡ್ ಅಳವಡಿಸಲಾಗಿದೆ. ಅತೀ ಎತ್ತರದ ವಾಹನಗಳು ಇದರಲ್ಲಿ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw