ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ! - Mahanayaka

ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!

mijoram
06/10/2021

ಮಿಜೋರಾಂ: ಪತಿ ಪತ್ನಿಯ ಜಗಳವು ಭೀಕರವಾಗಿ ಅಂತ್ಯ ಕಂಡಿದ್ದು, ಪತಿಯಿಂದ ದೂರವಾಗಿ ಬದುಕುತ್ತಿದ್ದ ಪತ್ನಿಯನ್ನು ಪತಿಯು ಭೀಕರವಾಗಿ ಹತ್ಯೆ ಮಾಡಿದ್ದು, ಈ ಸಂದರ್ಭ ಆತನೂ ಸಾವನ್ನಪ್ಪಿರುವ ಘಟನೆ ಮಿಜೋರಾಂನ ಲುಂಗೇಲಿಯಲ್ಲಿ ನಡೆದಿದೆ.

ರೊಹಮಿಗ್ಲಿಯಾನ ಎಂಬಾತ ಈ  ಬೀಬತ್ಸ ಕೃತ್ಯ ನಡೆಸಿದ್ದಾನೆ. ತನ್ನ ಜೊತೆಗೆ ಜಗಳವಾಡಿ ತನ್ನ ಪುತ್ರಿಯ ಜೊತೆಗೆ ಪತ್ನಿ ಪ್ರತ್ಯೇಕವಾಗಿ ಜೀವಿಸುತ್ತಿದ್ದು, ಇದರಿಂದ ಆಕ್ರೋಶಗೊಂಡ ಆತ ಪತ್ನಿ ಇದ್ದ ಮನೆಗೆ ಹೋಗಿದ್ದಾನೆ. ಬಳಿಕ ಪುತ್ರಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾನೆ.

ಇದಾದ ಬಳಿಕ ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಪತ್ನಿಯ ಪಕ್ಕದಲ್ಲಿ ಕುಳಿತಿದ್ದು, ತನಗೆ ಸಿಗರೇಟ್ ತಂದು ಕೊಡುವಂತೆ ಕೇಳಿದ್ದಾನೆ. ಸಿಗರೇಟ್ ಬಾಯಲ್ಲಿಡುತ್ತಾ, ತಲೆ ಸುತ್ತು ಬಂದವನಂತೆ ನಟಿಸಿದ್ದು, ಪತ್ನಿ ಆತನನ್ನು ಹಿಡಿದುಕೊಳ್ಳಲು ಸಮೀಪ ಬರುತ್ತಿದ್ದಂತೆಯೇ ಆಕೆಯನ್ನು ತಬ್ಬಿಕೊಂಡಿದ್ದಾನೆ. ಆಗಲೇ ಪತಿಯ ದೇಹದಲ್ಲಿದ್ದ ಬಾಂಬ್ ಸ್ಫೋಟಗೊಂಡಿದ್ದು, ಇಬ್ಬರ ದೇಹವೂ ಛಿದ್ರಛಿದ್ರವಾಗಿದೆ.

ಪತಿಯು ಪತ್ನಿಯ ಬಳಿಗೆ ಬರುವ ವೇಳೆ ತನ್ನ ಬಟ್ಟೆಯೊಳಗೆ ಜಿಲೆಟಿನ್  ಬಾಂಬ್ ಇಟ್ಟುಕೊಂಡು ಬಂದಿದ್ದ ಎನ್ನಲಾಗಿದೆ. ಇದೀಗ ಕೌಟುಂಬಿಕ ಕಲಹ ಪತಿ ಪತ್ನಿಯರಿಬ್ಬರ ಸಾವಿನೊಂದಿಗೆ ಅಂತ್ಯವಾಗಿರುವುದು ದುರದೃಷ್ಟಕರವಾಗಿದೆ. ಈ ನಡುವೆ ಇವರ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ತಂದೆಯಿಂದಲೇ ಮಗನ ಮೇಲೆ ಗುಂಡೇಟು: ಬಾಲಕನ ಮೆದುಳು ನಿಷ್ಕ್ರಿಯ | ಅಂಗಾಂಗ ದಾನಕ್ಕೆ ಸಿದ್ಧತೆ

ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ರೈತರ ಹತ್ಯೆ ನಡೆದಿದೆ | ರವಿಕಿರಣ್ ಪೂನಚ

ಕಾರ್ಮಿಕರ ಮೇಲೆ ಗುಂಡು ಹಾರಾಟ ಪ್ರಕರಣ ದಿಕ್ಕು ತಪ್ಪದ ರೀತಿಯಲ್ಲಿ ಸಮಗ್ರ ತನಿಖೆ ನಡೆಸಿ | ಡಿವೈಎಫ್ ಐ ಆಗ್ರಹ

ಮನೆಗೆ 1 ಕಿ.ಮೀ. ದೂರವಿರುವಾಗಲೇ ನಡೆಯಿತು ಅಪಘಾತ | ತಾಯಿ, ಮಗ ಇಬ್ಬರೂ ಸಾವು

ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್: LPG ಸಿಲಿಂಡರ್ ಗೆ 15 ರೂಪಾಯಿ ಏರಿಕೆ

ಆರೆಸ್ಸೆಸ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಅಜ್ಞಾನ, ಭೀತಿ, ವೈಯಕ್ತಿಕ ಹತಾಶೆಯಾಗಿದೆ | ಬಿ.ವೈ.ವಿಜಯೇಂದ್ರ ಕಿಡಿ

ಇತ್ತೀಚಿನ ಸುದ್ದಿ