ಶಾಸಕರ ಕಾರಿಗೆ ಮಹಿಳೆ ಬಲಿ: ಕಾರು -ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವು

mp kumarswamy car
03/10/2021

ಹಾಸನ: ಶಾಸಕರ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿ, ಮಹಿಳೆಯ ಮೊಮ್ಮಗ ತೀವ್ರವಾಗಿ ಗಾಯಗೊಂಡಿರುವ ಘಟನೆ  ಹಾಸನ ಜಿಲ್ಲೆಯ ಬೇಲೂರಿನ ಹನುಮಂತನಗರದಲ್ಲಿ ನಡೆದಿದೆ.

58 ವರ್ಷ ವಯಸ್ಸಿನ ಹನುಮಂತನಗರದ ನಿವಾಸಿ ಹೂವಮ್ಮ ಮೃತಪಟ್ಟವರಾಗಿದ್ದು, ಇವರ ಮೊಮ್ಮಗ ಪ್ರೀತಂ ಗಾಯಗೊಂಡವರಾಗಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ನ ಹಿಂದೆ ಕುಳಿತಿದ್ದ ಹೂವಮ್ಮ ಅವರು ರಸ್ತೆಗೆಸೆಯಲ್ಪಟ್ಟಿದ್ದು, ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕಾರನ್ನು ರಿಪೇರಿ ಮಾಡಿಸಲು ಬೆಂಗಳೂರಿಗೆ ಹೋಗುತ್ತಿರುವಾಗ ಏಕಾಏಕಿ ಬೈಕ್ ಡಿಕ್ಕಿ ಹೊಡೆದಿದೆ ಎಂದು ಕಾರು ಚಾಲಕ ದೂರಿದ್ದಾನೆ. ಆದರೆ, ಕಾರು ಚಾಲಕ ಪಾನಪತ್ತನಾಗಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ವೇಳೆ ಶಾಸಕರು ಕಾರಿನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬೇಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಅಂಬೇಡ್ಕರ್ ಗಿಂತಲೂ ದೊಡ್ಡವರ ಇವರೆಲ್ಲ? | ಬಿಜೆಪಿಯ ಮತಾಂತರ ಹೈಡ್ರಾಮದ ವಿರುದ್ಧ ರಮೇಶ್ ಕುಮಾರ್ ಕಿಡಿ

ಕಾರು ಹತ್ತಿಸಿ ಪ್ರತಿಭಟನಾ ನಿರತ ಮೂವರು ರೈತರ ಭೀಕರ ಹತ್ಯೆ ಮಾಡಿದ ಕೇಂದ್ರ ಸಚಿವರ ಪುತ್ರ!

ಕ್ರೂಸ್ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ ಅರೆಸ್ಟ್

ಪತ್ನಿಯನ್ನು 500 ರೂಪಾಯಿಗೆ ಮಾರಾಟ ಮಾಡಿದ ಪತಿ | ಖರೀದಿಸಿದವನಿಂದ ಮಹಿಳೆಯ ಅತ್ಯಾಚಾರ

ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ದಾರುಣ ಸಾವು!

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಒಂದು ವರ್ಷದ ಬಳಿಕ ಆರೋಪಿ ಅರೆಸ್ಟ್

ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಹಿಂದೂಗಳಿಗೆ ಅಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ | ಕೆ.ಎಸ್‌.ಈಶ್ವರಪ್ಪ ಆರೋಪ

ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!

ಇತ್ತೀಚಿನ ಸುದ್ದಿ

Exit mobile version