ಟಿಎಂಸಿ ಸೇರ್ಪಡೆಗೂ ಮುನ್ನ ಕೇಶಮುಂಡನ ಮಾಡಿ ಆತ್ಮಶುದ್ಧಿ ಮಾಡಿಕೊಂಡ ಬಿಜೆಪಿ ಶಾಸಕ! - Mahanayaka

ಟಿಎಂಸಿ ಸೇರ್ಪಡೆಗೂ ಮುನ್ನ ಕೇಶಮುಂಡನ ಮಾಡಿ ಆತ್ಮಶುದ್ಧಿ ಮಾಡಿಕೊಂಡ ಬಿಜೆಪಿ ಶಾಸಕ!

ashis
06/10/2021

ತ್ರಿಪುರ:  ತ್ರಿಪುರಾದ ಬಿಜೆಪಿ ಶಾಸಕ ಆಶಿಶ್ ದಾಸ್ ಕೋಲ್ಕತ್ತಾಗೆ ಆಗಮಿಸಿದ್ದು, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷೆಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯಲ್ಲಿದ್ದ ತಪ್ಪಿಗಾಗಿ ಅವರು ಟಿಎಂಸಿ ಸೇರುವುಕ್ಕೂ ಮೊದಲು ಕೇಶಮುಂಡನ ಮಾಡಿ ಆತ್ಮಶುದ್ಧಿ ಮಾಡಿಕೊಂಡಿದ್ದಾರೆ.

ಹವನದ ಬಳಿಕ ಕೇಶ ಮುಂಡನ ಮಾಡಿಕೊಂಡ ಆಶಿಶ್, ಬಳಿಕ ಕಾಳಿಘಾಟ್‌ ಬಳಿ ಗಂಗಾ ನದಿಯಲ್ಲಿ ಮಿಂದೆದಿದ್ದಾರೆ. ಪ್ರಾಯಶ್ಚಿತ ಪಡಲು ತಾವು ಹೀಗೆ ಮಾಡುತ್ತಿರುವುದಾಗಿ ಆಶಿಶ್ ತಿಳಿಸಿದ್ದು, ಟಿಎಂಸಿ ಸೇರುವ ಮುನ್ನ ತಮ್ಮನ್ನು ‘ಶುದ್ಧ’ ಮಾಡಿಕೊಳ್ಳಲು ಬಯಸಿದ್ದಾಗಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಬಗ್ಗೆ  ಬಿಜೆಪಿಯಲ್ಲಿರುವಾಗಲೇ ಆಶಿಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ್ದರು.  ಭವಾನಿಪುರ ಕ್ಷೇತ್ರದಿಂದ ಭಾರೀ ಅಂತರದಲ್ಲಿ ಗೆದ್ದಿದ್ದಕ್ಕೆ ಅವರಿಗೆ ಶುಭಾಶಯವನ್ನೂ ತಿಳಿಸಿದ್ದರು. ಇದಕ್ಕಾಗಿ ಅವರು ಬಿಜೆಪಿ ನಾಯಕರ ವಿರೋಧವನ್ನೂ ಕಟ್ಟಿಕೊಂಡಿದ್ದರು.

ಟಿಎಂಸಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು,  ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ,   ನಾನು ತಿನ್ನುವುದಿಲ್ಲ ಹಾಗೂ ತಿನ್ನಲು ಬಿಡುವುದಿಲ್ಲ  ಈ ಹಿಂದೆ ಪ್ರಧಾನಿ ಆಡಿದ್ದ ವೀರತನದ  ಮಾತುಗಳು ಈಗ ಜೋಕ್ ಆಗಿದೆ.. ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದೆ ಎಂದು ಆಶಿಶ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಅತ್ಯಾಚಾರ ನಡೆದು ಕೇವಲ 9 ದಿನಗಳಲ್ಲಿಯೇ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

ಗಾಂಧಿ ಜಯಂತಿ ದಿನವೇ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ದೈಹಿಕ ಹಲ್ಲೆ

ಸಾವಿನ ಕೊನೆಯ ಕ್ಷಣದಲ್ಲಿ “ಅಪ್ಪಾ ಬೇಗ ಬನ್ನಿ” ಎಂದು ಮಗ ಹೇಳಿದ್ದ | ಮಗನ ಸಾವು ನೆನೆದು ಬಿಕ್ಕಿಬಿಕ್ಕಿ ಅತ್ತ ರೈತ

ಲಖೀಂಪುರ್ ಖೇರ್ ಸಚಿವನ ಪುತ್ರ ರೈತರನ್ನು ಕೆಣಕಿ, ಗುಂಡು ಹಾರಿಸಿದ್ದ | ಎಫ್ ಐಆರ್ ನಲ್ಲಿ ಉಲ್ಲೇಖ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಬರ್ಬರ ಹತ್ಯೆ | ತಾಯಿ ಹಾಗೂ ಆಕೆಯ ಪ್ರಿಯಕರ ಅರೆಸ್ಟ್

ಏಕಾಏಕಿ ಮುರಿದು ಬಿದ್ದ ತೂಗು ಸೇತುವೆ | ನದಿಗೆ ಬಿದ್ದ 30 ವಿದ್ಯಾರ್ಥಿಗಳು

ಸಚಿವ ಸಿ.ಸಿ.ಪಾಟೀಲ್ ಕಾರು ಬೈಕ್ ಗೆ ಡಿಕ್ಕಿ | ಬೈಕ್ ಸವಾರನನ್ನು ಬಿಟ್ಟು ಸಚಿವರನ್ನು ರಕ್ಷಿಸಲು ಪೊಲೀಸರಿಂದ ಯತ್ನ!?

ಇತ್ತೀಚಿನ ಸುದ್ದಿ