ಶಾಸಕ ಹೆಚ್.ಹಾಲಪ್ಪ ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿ - Mahanayaka
9:22 PM Wednesday 5 - February 2025

ಶಾಸಕ ಹೆಚ್.ಹಾಲಪ್ಪ ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿ

bengalore
07/02/2023

ಬೆಂಗಳೂರು: ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಹಾಲಪ್ಪ  ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ.

ಸೋಮವಾರ ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿತ್ತು.ಇನ್ನೋವಾ ಕಾರ್ ನ ಚಾಲಕ ಅತಿವೇಗದ  ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಅಪಘಾತ ಇಬ್ಬರ ಜೀವ ಬಲಿ ಪಡೆದಿದೆ.

ಮಜೀದ್ ಖಾನ್ ಮತ್ತು ಅಯ್ಯಪ್ಪ ಈ ಇಬ್ಬರು ಅಪಘಾತದಲ್ಲಿ ಮೃತಪಟ್ಟವರಾಗಿದ್ದು, ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ, ಮತ್ತು ಶೇರ್ ಗಿಲಾನಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳಾಗಿದ್ದಾರೆ.

ಮೋಹನ್ ಅಪಘಾತ ಮಾಡಿರುವ ಚಾಲಕ ಎನ್ನಲಾಗಿದೆ.  ಶಾಸಕರ ವಾಹನಕ್ಕೆ ಬಳಸುವ ಪಾಸ್‍ ಅನ್ನು ಈ ವಾಹನಕ್ಕೂ ಹಾಲಪ್ಪನವರ ಬೀಗರು ಬಳಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದು, ಹೀಗೆ ಶಾಸಕರಿಗೆ ನೀಡಲಾಗಿರುವ ಪಾಸ್‌ಗಳನ್ನು  ಯಾರು ಬೇಕಾದರೂ ಬಳಸಬಹುದೇ?  ಶಾಸಕರ ಪಾಸ್ ಬೀಗರ ವಾಹನಗೆ ಹೇಗೆ ಬಂದಿತು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ