ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರ ಬಂಧನ, ತೀವ್ರ ವಿಚಾರಣೆ - Mahanayaka
6:08 AM Thursday 12 - December 2024

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರ ಬಂಧನ, ತೀವ್ರ ವಿಚಾರಣೆ

sathish reddy
15/02/2023

ಬೆಂಗಳೂರು: ಬಿಜೆಪಿ ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿರುವ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ ನೀಡಿರುವ ಆರೋಪದಲ್ಲಿ ಇಬ್ಬರ ಬಂಧನ ಮಾಡಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಭಯಾನಕ ಸ್ಕೆಚ್ ಹಾಕಲಾಗಿದೆ. ರೌಡಿಗಳ ಗ್ಯಾಂಗ್‌ವೊಂದು ಸತೀಶ್ ರೆಡ್ಡಿ ಹತ್ಯೆಗೆ ಬರೋಬ್ಬರಿ 2 ಕೋಟಿ ರೂ. ಸುಪಾರಿ ಪಡೆದಿದೆ. ಕುಖ್ಯಾತ ರೌಡಿಶೀರ್ ವಿಲ್ಸನ್ ಗಾರ್ಡನ್ ನಾಗನಿಂದ ರೆಡ್ಡಿ ಹತ್ಯೆಗೆ  ಪ್ಲಾನ್ ಕೂಡ ಮಾಡಲಾಗಿತ್ತು. 2 ಕೋಟಿ ರೂ.ಗೆ ಸುಪಾರಿ ಪಡೆದುಕೊಂಡಿದ್ದ ವಿಲ್ಸನ್‌ ಗಾರ್ಡರನ್‌ ನಾಗನ ತಂಡವು ಸದ್ಯದಲ್ಲೇ ಸತೀಶ್​ ರೆಡ್ಡಿ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಸತೀಶ್ ರೆಡ್ಡಿ ಎಲ್ಲ ಚಲನವಲನಗಳನ್ನು ಹಾಗೂ ದಿನನಿತ್ತ ಕಾರ್ಯ ವೈಖರಿಗಳನ್ನು ಫಾಲೋ ಮಾಡಲಾಗುತ್ತಿತ್ತು. ಆದರೆ, ಸ್ವಲ್ಪದರಲ್ಲೇ ಎಚ್ಚೆತ್ತುಕೊಂಡ ಶಾಸಕ ಸತೀಶ್ ರೆಡ್ಡಿ ಮರ್ಡರ್‌ ಸ್ಕೆಚ್‌ನಿಂದ ಪಾರಾಗಿದ್ದಾರೆ.

ಅವರಿಗೆ ಕೊಲೆ ಮಾಡುವ ಬಗ್ಗೆ ಮಾಡಲಾದ ಸಂಚು ತಿಳಿದಿದ್ದು, ಕೂಡಲೆ ಎಚ್ಚೆತ್ತುಕೊಂಡು ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ರಕ್ಷಣೆ ನೀಡುವಂತೆ ತಿಳಿಸಿದ್ದಾರೆ. ವಿಲ್ಸನ್‌ ಗಾರ್ಡನ್‌ ನಾಗನ ಗ್ಯಾಂಗ್ ನಿಂದಲೇ ಸತೀಶ್‌ ರೆಡ್ಡಿ ಮರ್ಡರ್ ಪ್ಲಾನ್​ ಬಯಲಾಗಿದೆ.

ರೌಡಿಗಳ ಪ್ಲಾನ್ ಬಗ್ಗೆ ಸುಳಿವು ಚಿತ್ರದುರ್ಗದಲ್ಲಿ ಲೀಕ್ ಆಗಿತ್ತು. ನಾಗನ ಗ್ಯಾಂಗ್ ನಲ್ಲಿದ್ದ ಹೊಳಲ್ಕೆರೆ ತಾಲೂಕಿನ ಆಕಾಶ್​ ನಿಂದ ಲೀಕ್​​ ಆಗಿದೆ. ಸತೀಶ್​​ರೆಡ್ಡಿ ಬೆಂಬಲಿಗನಿಗೆ ಮಾಹಿತಿ ನೀಡಿದ್ದು ಚಂದ್ರು ಎಂಬಾತ. ಬೊಮ್ಮನಹಳ್ಳಿ ನಿವಾಸಿ ಚಂದ್ರು ಕರೆ ಮಾಡಿದಾಗ ಹೇಳಿದ್ದ ಆಕಾಶ್. ಆಕಾಶ್ ಹೇಳಿದ್ದ ಆಡಿಯೋ, ರೌಡಿ ಪೋಟೋ ಸಹಿತ ದೂರು ನೀಡಲಾಗಿದೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎಫ್ಐಆರ್ ಆಗ್ತಿದ್ದಂತೆ ನಾಗನ ಗ್ಯಾಂಗ್ ಕೂಡ ಬೆಂಗಳೂರಿನಿಂದ ಎಸ್ಕೇಪ್​ ಆಗಿದೆ. ಬೊಮ್ಮನಹಳ್ಳಿ ಪೊಲೀಸ್​​ ಸ್ಪೇಷಲ್ ಟೀಂ ನಿಂದ ಹುಡುಕಾಟ ಮಾಡಲಾಗುತ್ತಿದೆ.

ಹೊಳಲ್ಕೆರೆ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದು, ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಪೊಲೀಸರಿಗೆ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಬಂಧನ ಮಾಡಲಾಗಿದೆ. ಬಂಧಿತರನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ವಿಧಾನಸೌಧದಲ್ಲಿ ಸತೀಶ್ ರೆಡ್ಡಿ ಮಾತನಾಡಿ, ನನಗೆ ಮಂಗಳವಾರ ಸಂಜೆ ಪೊಲೀಸರು ಈ ಬಗ್ಗೆ ತಿಳಿಸಿದರು. ಈಗ ಚುನಾವಣೆ ಇದೆ, ರಾಜಕೀಯ ಕಾರಣಗಳೂ ಇರಬಹುದು. ಈ ವಿವಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ತಿಳಿಸಿದ್ದೇನೆ. ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಪಡೆದುಕೊಳ್ಳಲು ಸಿಎಂ ಸೂಚಿಸಿದರು. ಆದರೆ ನನಗೆ ಭದ್ರತೆ ಬೇಡ ಅಂದಿದ್ದೇನೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ . ನಾನು ಭಯ ಪಡುವುದಿಲ್ಲ. ಸುಪಾರಿ ಹಿಂದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶವೂ ಇರಬಹುದು. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ತಾರೆ. ಆರೋಪಿಗಳು ನನ್ನ ಚಲನವಲನ ಮೇಲೆ ಗಮನ ಇಟ್ಟಿದ್ದರಂತೆ. ಅವರು ಎಲ್ಲೆಲ್ಲಿ ಓಡಾಡಿದ್ದಾರೆ, ಏ‌ನೇನು ಮಾಡಿದ್ದಾರೆ ಅಂತ ಪೊಲೀಸರು ಮಾಹಿತಿ ಪಡ್ಕೊಂಡಿದ್ದಾರೆ ಎಂದು ತಿಳಿಸಿದರು.

ನಾನು ಭಯ ಪಡಲ್ಲ.‌ಇದಕ್ಕೆಲ್ಲ ಹೆದರಲ್ಲ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡುವುದಿಲ್ಲ. ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ ಸುಪಾರಿ ಬಗ್ಗೆ ಮಾತಾಡಿರುವವ ಆಡಿಯೋ ಸಿಕ್ಕಿದೆ ಪೊಲೀಸರಿಗೆ. ನಾನು ಯಾರ ಮೇಲೂ ಆರೋಪ ಮಾಡಲ್ಲ ಆದರೆ ಈ ಬಗ್ಗೆ ಪಾರದರ್ಶಕ ತನಿಖೆ ಆಗಲಿ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ