ಉಡುಪಿ: 108 ಸಿಬ್ಬಂದಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಯಶ್ ಪಾಲ್ ಸುವರ್ಣ - Mahanayaka
12:04 PM Saturday 21 - September 2024

ಉಡುಪಿ: 108 ಸಿಬ್ಬಂದಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ ಯಶ್ ಪಾಲ್ ಸುವರ್ಣ

108
24/07/2023

ಉಡುಪಿ: ದಿನದ 24ಗಂಟೆಯೂ ಸೇವೆ ನೀಡುವ ಉಡುಪಿಯ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ವಿಶ್ರಾಂತಿ ಹಾಗೂ ನೆಲೆಗಾಗಿ ಯಾವ ಕೊಠಡಿಯೂ ಇಲ್ಲದೆ ಸೇವೆ ನೀಡುತ್ತಿದ್ದು, ಈ ಬಗ್ಗೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ಶಾಸಕರಾದ ಯಶ್ ಪಾಲ್ ಸುವರ್ಣ ಅವರ ಗಮನಕ್ಕೆ ತಂದಿದ್ದಾರೆ.

ಕೂಡಲೇ ಸ್ಪಂದಿಸಿದ ಶಾಸಕರು ಉಚಿತ ಆಂಬುಲೆನ್ಸ್ 108 ರ ಸಿಬ್ಬಂದಿಗಳಿಗೆ ಕೊಠಡಿಯ ವ್ಯವಸ್ಥೆ ನೀಡಿ ಸ್ಪಂದಿಸಿದ್ದಾರೆ.ಜೊತೆಗೆ ಸಮಾಜದಲ್ಲಿ ನಿರಂತರ ಸೇವೆ  ಸಲ್ಲಿಸುವ 108 ಸಿಬ್ಬಂದಿಗಳ ಮುಂದಿನ ಯಾವುದೇ ಸಮಸ್ಯೆಗೂ ಸ್ಪಂದಿಸುವ ಭರವಸೆ  ನೀಡಿರುತ್ತಾರೆ . ಶಾಸಕರ  ಶೀಘ್ರ ಸ್ಪಂದನೆಗೆ ವಿಶು ಶೆಟ್ಟಿ ಹಾಗೂ 108 ಸಿಬ್ಬಂದಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…


Provided by

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ