ಸಾರ್ವಜನಿಕ ಪ್ರದೇಶದಲ್ಲಿಯೇ ಫ್ರಾನ್ಸ್ ಅಧ್ಯಕ್ಷಗೆ ಕಪಾಳ ಮೋಕ್ಷ ಮಾಡಿದ ಯುವಕ
ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಮೇಲ್ ಅವರಿಗೆ ಸಾರ್ವಜನಿಕ ಪ್ರದೇಶದಲ್ಲಿಯೇ ಕಪಾಳ ಮೋಕ್ಷ ನಡೆಸಿದ ಘಟನೆ ಆಗ್ನೇಯ ಫ್ರಾನ್ಸ್ ನ ಡ್ರೋಮ್ ಪ್ರಾಂತ್ಯದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಫ್ರಾನ್ಸ್ ನ ಡ್ರೋಮ್ ಪ್ರಾಂತ್ಯಕ್ಕೆ ಅಧ್ಯಕ್ಷರು ಭೇಟಿ ನೀಡಿದ್ದರು. ಈ ವೇಳೆ ಬ್ಯಾರಿಕೇಡ್ ಗಳಾಚೆ ನಿಂತು ಕೂಗುತ್ತಿದ್ದ ಜನರನ್ನು ಕಂಡು ಅಧ್ಯಕ್ಷ ಮ್ಯಾಕ್ರನ್ ಕಾರು ನಿಲ್ಲಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ತೆರಳಿದ್ದಾರೆ.
ಈ ವೇಳೆ ವ್ಯಕ್ತಿಯೋರ್ವನಿಗೆ ಅಧ್ಯಕ್ಷರು ಶೇಕ್ ಹ್ಯಾಂಡ್ ಮಾಡಿದ್ದಾರೆ. ಈ ವೇಳೆ ಆತ ಏಕಾಏಕಿ ಇನ್ನೊಂದು ಕೈಯಿಂದ ಅಧ್ಯಕ್ಷರ ಮುಖಕ್ಕೆ ಥಳಿಸಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ತಕ್ಷಣವೇ ಅಧ್ಯಕ್ಷರ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ತಡೆದಿದ್ದಾರೆ. ಇದಾದ ಬಳಿಕವೂ ಅಧ್ಯಕ್ಷರು ಸಾರ್ವಜನಿಕರ ಬಳಿ ವಿಚಾರ ವಿನಿಮಯ ಮುಂದುವರಿಸಿದ್ದಾರೆ.
ಇದೇ ಗುಂಪಿನಲ್ಲಿ ಅಧ್ಯಕ್ಷರಿಗೆ ಮುಜುಗರ ಉಂಟು ಮಾಡಿಸಲೆಂದೇ ಕಪಾಳ ಮೋಕ್ಷ ಮಾಡಲು ಇನ್ನಿಬ್ಬರು ಆಗಮಿಸಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.