ಮನೆಯ ಜೊತೆ ಸುಟ್ಟು ಕರಕಲಾದ ಲಕ್ಷಾಂತರ ರೂ. ನೋಟುಗಳು

19/01/2021

ಹುಬ್ಬಳ್ಳಿ: ವಿದ್ಯುತ್ ಅವಘಡದಿಂದ ಮನೆ ಸೇರಿದಂತೆ ಲಕ್ಷಾಂತರ ರೂಪಾಯಿಯ ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ.

ಬ್ಯಾಂಕ್ ನಿಂದ ತಂದಿಟ್ಟಿದ್ದ 100, 200, 500 ಮುಖ ಬೆಲೆಯ ನೋಟುಗಳು ಸುಟ್ಟು ಕರಕಲಾಗಿದ್ದು,  ಮನೆಯನ್ನು ಕಾಯಬೇಕಿದ್ದ ದೇವರು ಕೂಡ ಸುಟ್ಟು ಕರಕಲಾಗಿದ್ದು, ವಾಸಿಸುತ್ತಿದ್ದ ಮನೆ ಸುಟ್ಟು ಹೋಗಿದೆ.

ವಿದ್ಯುತ್ ಅವಘಡದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.  ತಾಲೂಕಿನ ಸುಳ್ಳ ಗ್ರಾಮದ ಕಲ್ಲಪ್ಪ, ಈಶ್ವರಪ್ಪ ವಾಲಿ ಹಾಗೂ ಶಿವಬಸಪ್ಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version