ವ್ಯಕ್ತಿಯ ಜೇಬಿನಲ್ಲೇ ಬ್ಲಾಸ್ಟ್ ಆದ ಮೊಬೈಲ್ : ದೃಶ್ಯ ವೈರಲ್

mobile blast
19/05/2023

ಕೇರಳ: ವ್ಯಕ್ತಿಯೊಬ್ಬರ ಜೇಬಿನಲ್ಲೇ ಮೊಬೈಲ್ ಸಿಡಿದು ಬೆಂಕಿ ಹತ್ತಿಕೊಂಡ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದ್ದು, ವ್ಯಕ್ತಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಇಲಿಯಾಸ್ ಎಂಬ ವ್ಯಕ್ತಿ ಗುರುವಾರ ಮರೋಟ್ಟಿಚಾಲ್ ಪ್ರದೇಶದ ಚಹಾ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ವೇಳೆ  ಏಕಾಏಕಿ ಅವರ ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿದೆ. ಒಂದು ವರ್ಷಗಳ ಹಿಂದೆ ಸುಮಾರು ಸಾವಿರ ರೂಪಾಯಿ ನೀಡಿ ಇಲಿಯಾಸ್ ಸಾಧಾರಣ ಫೋನ್ ವೊಂದನ್ನು ಖರೀದಿಸಿದ್ದರು.  ಈ ಫೋನ್ ಇದೀಗ ಬ್ಲಾಸ್ಟ್ ಆಗಿದೆ. ಸದ್ಯ ಯಾವುದೇ ಅಪಾಯವಾಗದೇ ತನ್ನ ಜೀವ ಉಳಿದಿದೆ ಎನ್ನುವ ಖುಷಿಯಲ್ಲಿರುವ ಇಲಿಯಾಸ್, ಇನ್ನು ಮುಂದೆ ನಾನು ಫೋನ್ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಮರೋಟ್ಟಿಚಾಲ್ ಪ್ರದೇಶದ ಟೀ ಅಂಗಡಿಯಲ್ಲಿ ಇಲಿಯಾಸ್ ಟೀ ಸೇವಿಸುತ್ತಿದ್ದರು. ಈ ವೇಳೆ ಏಕಾಏಕಿ ಫೋನ್ ಬ್ಲಾಸ್ಟ್ ಆಗಿದೆ. ಅವರ ಶರ್ಟ್ ಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೇ ಅವರು ಫೋನ್ ನ್ನು ಜೇಬಿನಿಂದ ತೆಗೆದು ಎಸೆದು, ಕೈಯಿಂದಲೇ ಬೆಂಕಿಯನ್ನು  ಹೊಡೆದು, ಬೆಂಕಿ ಆರಿಸಿದ್ದಾರೆ. ಇದರಿಂದಾಗಿ ಅವರಿಗೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version