ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರ ದಾರುಣ ಸಾವು
ಕೋಲ್ಕತ್ತಾ: ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ರಹಾರಾದ ಖಾರ್ದಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ನಡೆದಿದೆ.
ಕಾರು ಚಾಲಕರಾಗಿ ದುಡಿಯುತ್ತಿರುವ 38 ವರ್ಷ ವಯಸ್ಸನ ರಾಜಾ ದಾಸ್ ಹಾಗೂ ಅವರ ಪತ್ನಿ ಮತ್ತು 10 ವರ್ಷ ವಯಸ್ಸಿನ ಮಗ ವಿದ್ಯುತ್ ಶಾಕ್ ಗೆ ಬಲಿಯಾದವರು ಎಂದು ತಿಳಿದು ಬಂದಿದೆ. ರಹಾರಾ ಬಳಿಯ ಪಟುಲಿಯಾದಲ್ಲಿರುವ ಸರ್ಕಾರಿ ವಸತಿ ಸಂಕೀರ್ಣದ ನೆಲಮಹಡಿಯಲ್ಲಿ ಇವರು ವಾಸಿಸುತ್ತಿದ್ದು, ಇವರಿದ್ದ ಕೋಣೆಯಲ್ಲಿ ನೀರಿನಂಶ ಹೆಚ್ಚಾಗಿ ಇದ್ದು, ಕೋಣೆ ಜಲಾವೃತ ಸ್ಥಿತಿಯಲ್ಲಿತ್ತು ಎನ್ನಲಾಗಿದೆ.
ರಾಜಾ ದಾಸ್ ಅವರು ತಮ್ಮ ಸೆಲ್ ಫೋನ್ ಚಾರ್ಜ್ ಇಡಲು ಪ್ಲಗ್ ಇನ್ ಮಾಡಿ ಸ್ವಿಚ್ ಬೋರ್ಡ್ ಮುಟ್ಟಿದ್ದು, ಈ ವೇಳೆ ನೀರಿನ ಅಂಶದಿಂದಾಗಿ ಅವರಿಗೆ ಶಾಕ್ ತಗಲಿದೆ. ಅವರಿಗೆ ಶಾಕ್ ತಗಲಿರುವುದು ಕಂಡು ರಕ್ಷಣೆಗೆಂದು ಪತ್ನಿಯೂ ಕೋಣೆಗೆ ಕಾಲಿಟ್ಟಿದ್ದು, ಕೋಣೆಯಲ್ಲಿ ನೀರಿನ ಅಂಶ ಇದ್ದುದರಿಂದ ಅವರಿಗೂ ಶಾಕ್ ಹೊಡೆದಿದೆ. ಈ ವೇಳೆ 10 ವರ್ಷದ ಮಗ ಕೂಡ ತಾಯಿಯನ್ನು ರಕ್ಷಿಸಲು ಆಗಮಿಸಿದ್ದು, ಆತನಿಗೂ ಶಾಕ್ ತಗಲಿದೆ.
ಇನ್ನೂ ಈ ದಂಪತಿಯ ಇನ್ನೋರ್ವ ಮಗ ಕೋಣೆಗೆ ಬಾರದೇ ಭಯ ಭೀತವಾಗಿ ಕೂಗಿಕೊಂಡಾಗ ನೆರೆಹೊರೆಯವರು ಸ್ಥಳಕ್ಕೆ ಓಡಿ ಬಂದು ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ, ಮೂವರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಇವರಿದ್ದ ವಸತಿ ನಿಲಯದ ನೆಲ ಮಹಡಿಯಲ್ಲಿರುವ ಎಲ್ಲ ಕೋಣೆಗಳು ತೀವ್ರವಾದ ನೀರಿನ ಅಂಶದಿಂದ ಕೂಡಿದ್ದು, ನೆಲಗಳು ಒದ್ದೆಯಾಗಿರುವ ಸ್ಥಿತಿಯಲ್ಲಿಯೇ ಇವೆ. ಹೀಗಾಗಿ ದಾಸ್ ಅವರು ಸ್ವಿಚ್ ಬೋರ್ಡ್ ಮುಟ್ಟಿದ ವೇಳೆ ವಿದ್ಯುತ್ ಶಾಕ್ ಆಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
“ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ…” | ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ
6 ಜನರು ಪ್ರಯಾಣಿಸುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಏಕಾಏಕಿ ಕಣ್ಮರೆ!
ಕೊನೆಗೂ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ
ಮದುವೆಯಾದ ಕೆಲವೇ ಹೊತ್ತಿನಲ್ಲಿ ಪ್ರೇಮಿಯೊಂದಿಗೆ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಪೋಷಕರು!
ಗೆಳೆಯನ ಜೊತೆಗೆ ಗೋವಾ ಪ್ರವಾಸಕ್ಕೆ ತೆರಳಿದ್ದ ನಟಿ ಕಾರು ಅಪಘಾತದಲ್ಲಿ ದಾರುಣ ಸಾವು!
ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!
ತರಗತಿ ಕೋಣೆಯಲ್ಲಿಯೇ ಮಹಿಳೆಯೊಂದಿಗೆ ಅಸಹ್ಯವಾಗಿ ನಡೆದುಕೊಂಡ ಮುಖ್ಯ ಶಿಕ್ಷಕ | ವಿಡಿಯೋ ವೈರಲ್
ರೇಣುಕಾಚಾರ್ಯ, ಕಾರಜೋಳ ಚಿರತೆ ಹಿಡಿಯುವುದರಲ್ಲಿ ಎಕ್ಸಪರ್ಟ್ ಗಳು | ಸದನದಲ್ಲಿ ಸ್ವಾರಸ್ಯಕರ ಚರ್ಚೆ