ಆನ್ ಲೈನ್ ಕ್ಲಾಸ್ ಗೆ ಹಾಜರಾಗಲು ಮೊಬೈಲ್ ಇಲ್ಲ ಎಂದು ಆತ್ಮಹತ್ಯೆಗೆ ಶರಣಾದ ಬಾಲಕಿ
21/06/2021
ಔರಂಗಾಬಾದ್: ಆನ್ ಲೈನ್ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗದ ಕಾರಣ 17 ವರ್ಷದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿ 11ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಆಕೆಯ ತಂದೆ-ತಾಯಿ ದಿನಗೂಲಿ ನೌಕರರಾಗಿದ್ದರು. ಕೊರೊನಾ ಹಿನ್ನೆಲೆ ಆನ್ ಲೈನ್ ನಲ್ಲಿಯೇ ಕ್ಲಾಸ್ ನಡೆಯುತ್ತಿದ್ದು, ಎಲ್ಲ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಬಾಲಕಿ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದು, ತನಗೂ ಮೊಬೈಲ್ ಬೇಕು ಎಂದು ಕೇಳಿದ್ದಾಳೆ. ಆದರೆ, ಫೋನ್ ಖರೀದಿಸುವಷ್ಟು ಹಣ ಅವರ ಬಳಿ ಇಲ್ಲದಿದ್ದುದರಿಂದಾಗಿ ಅವರು ಮೊಬೈಲ್ ನೀಡಿಲ್ಲ ಎಂದು ಹೇಳಲಾಗಿದೆ.
ಜೂನ್ 16ರಂದು ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನಾ ಆಕೆ ಬರೆದ ಪತ್ರ ಪೊಲೀಸರಿಗೆ ಲಭಿಸಿದ್ದು. ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗದೇ ಇರುವುದೇ ತನ್ನ ಸಾವಿಗೆ ಕಾರಣ ಎಂದು ಬಾಲಕಿ ಡೆತ್ ನೋಟ್ ಬರೆದಿದ್ದಾಳೆ ಎಂದು ತಿಳಿದು ಬಂದಿದೆ.