ಮೊಬೈಲ್ ಕೊಡಿಸಲ್ಲ ಎಂದಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಬಳ್ಳಾರಿ: ಮೊಬೈಲ್ ಕೊಡಿಸಲ್ಲ ಎಂದಿದ್ದಕ್ಕೆ ಮನೆಬಿಟ್ಟು ಹೋಗಿದ್ದ ವಿದ್ಯಾರ್ಥಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ತೂಲಹಳ್ಳಿ ಗ್ರಾಮದ ನಾಗರಾಜ್ (17) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ನಾಗರಾಜ ಮೊಬೈಲ್ ಕೊಡಿಸುವಂತೆ ಪೋಷಕರನ್ನು ಕೇಳಿದ್ದಾನೆ. ಮೊಬೈಲ್ ಕೊಡಿಸದ ಹಿನ್ನೆಲೆಯಲ್ಲಿ ಪೋಷಕರ ಮೇಲೆ ಮುನಿಸಿಕೊಂಡಿರುವ ನಾಗರಾಜ್, ಫೆ.19ರಂದು ಮನೆಬಿಟ್ಟು ಹೋಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಸಂಪೂರ್ಣ ಸುಟ್ಟು ಕರಕಲಾಗಿರುವ ನಾಗರಾಜನ ಮೃತದೇಹ ಕೊಟ್ಟೂರು ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾರತ ಮಾತೆಯ ರಕ್ಷಣೆಗೋಸ್ಕರ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಿ: ಪ್ರಮೋದ್ ಮುತಾಲಿಕ್ ಕರೆ
ದಲಿತರು ಮಾಧ್ಯಮಗಳ ಆರಂಭಿಸುವ ಮುನ್ನ ಇದನ್ನೊಮ್ಮೆ ಓದಿ….
ಸಂವಿಧಾನ ಪರ ಸಂಘಟನೆಗಳಿಂದ ಹೊಸ ಮಾಧ್ಯಮ ತರಲು ಗಂಭೀರ ಚಿಂತನೆ!
ಭೀಕರ ರಸ್ತೆ ಅಪಘಾತ: ಜಾತ್ರೆಗೆ ತೆರಳುತ್ತಿದ್ದ ಐವರು ಸಾವು; ಓರ್ವ ಗಂಭೀರ