ಮೊದಲ ಮಹಿಳಾ ಅಂಬುಲೆನ್ಸ್ ಚಾಲಕಿಯಾಗಿ ಪಿ.ಜಿ.ದೀಪಾಮೋಲ್
ತಿರುವನಂತಪುರಂ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂಬುವುದನ್ನು ಅಂಬುಲೆನ್ಸ್ ಚಾಲಕರಾಗಿ ವೃತ್ತಿಪ್ರಾರಂಭಿಸುವ ಮೂಲಕ ಮಹಿಳೆಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊಟ್ಟಾಯಂ ನಿವಾಸಿ ಪಿ.ಜಿ.ದೀಪಾಮೋಲ್ (42) ಅವರು ಕೇರಳದ ಮೊದಲ ಮಹಿಳಾ ಚಾಲಕರಾಗಿ ಸೇವೆಸಲ್ಲಿಸಲು ಸಿದ್ಧರಾಗಿದ್ದಾರೆ. ಅವರು ಆರೋಗ್ಯ ಇಲಾಖೆಯ ಅಂಬುಲೆನ್ಸ್ ಸೇವೆಯೊಂದಿಗೆ ಮೊದಲ ಮಹಿಳಾ ಚಾಲಕರಾಗಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದು, ತಿರುವನಂತಪುರಂನಲ್ಲಿ ನಡೆದ ಸಮಾರಂಭದಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಂದ ಅಂಬುಲೆನ್ಸ್‌ನ ಕೀ ಸ್ವೀಕರಿಸಿದ್ದಾರೆ.
ಇದು ಕೇರಳದ ಮಹಿಳೆಯರಲ್ಲಿ ತಾವು ಯಾವುದೇ ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ದೀಪಾಮೋಳ್ 2008ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದು, ಟ್ಯಾಕ್ಸಿ ಓಡಿಸುವುದರ ಜೊತೆಗೆ ಟಿಪ್ಪರ್ ಲಾರಿ ಸೇರಿದಂತೆ ಭಾರೀ ವಾಹನಗಳನ್ನು ಓಡಿಸಲು 2009ರಲ್ಲಿ ಪರವಾನಗಿ ಪಡೆದಿದ್ದಾರೆ. ಚಿಕ್ಕ ಡ್ರೈವಿಂಗ್ ಸ್ಕೂಲ್ ಕೂಡ ನಡೆಸುತ್ತಿದ್ದಾರೆ.
2021ರಲ್ಲಿ, ಅವರು 16 ದಿನಗಳಲ್ಲಿ ಕೊಟ್ಟಾಯಂನಿಂದ ಲಡಾಖ್‍ಗೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದರು. ಜೊತೆಗೆ ತ್ರಿಶೂರ್‍ನಲ್ಲಿ ನಡೆದ ಆಫ್-ರೋಡ್ ಡ್ರೈವಿಂಗ್ ಸ್ಪರ್ಧೆಯನ್ನು ಗೆದ್ದರು. ಅವರ ಪತಿ ಮೋಹನನ್ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅವರು ಡ್ರೈವಿಂಗ್‍ನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಮೂಲಕ ಕುಟುಂಬವನ್ನು ಬೆಂಬಲಿಸಿದರು. ದೀಪಾಮೋಲ್ ಅವರು ಅಂಬುಲೆನ್ಸ್ ಓಡಿಸಲು ಅಗತ್ಯವಿರುವ ಎಲ್ಲಾ ಡ್ರೈವಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ.
ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಮುಂಚೂಣಿಗೆ ಬರಬೇಕು. ಆರ್ಥಿಕ ಸ್ವಾವಲಂಬನೆ ಪಡೆಯಲು ಯಾವುದೇ ಕೆಲಸವನ್ನು ಕೈಗೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು ಎಂದು ದೀಪಾಮೋಳ್ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯುವತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ
ಉಕ್ರೇನ್ ಗೆ ನ್ಯಾಟೋ ಸದಸ್ಯತ್ವ ನೀಡುವಂತೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ಝೆಲೆನ್ಸ್ಕಿ ನಿರ್ಧಾರ
ಬಿಜೆಪಿಯನ್ನು ಬೇರು ಸಮೇತ ಕಿತ್ತೆಸೆಯಬೇಕು: ಮಮತಾ ಬ್ಯಾನರ್ಜಿ
ಉಕ್ರೇನ್ ನಲ್ಲಿ ಶೆಲ್ ದಾಳಿ ನಿಂತ ಬಳಿಕ ನವೀನ್ ಮೃತದೇಹ ತರುವ ಪ್ರಯತ್ನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪೊಲೀಸರಿಗೆ ಹೆದರಿ ಟಿಡಿಪಿ ಕಾರ್ಯಕರ್ತ ಆತ್ಮಹತ್ಯೆ