ಮೊದಲು ಕಾಂಗ್ರೆಸ್ ನ್ನು ತೊಡೆದು ಹಾಕಬೇಕು | ನಟ ಅಹಿಂಸಾ ಚೇತನ್
ಬೆಂಗಳೂರು: ಕಾಂಗ್ರೆಸ್ ಮತ್ತು ಆರೆಸ್ಸೆಸ್ ಹಿಂದಿನಿಂದಲೂ ಒಂದಕ್ಕೊಂದು ಬೆಸೆದುಕೊಂಡಿದೆ. ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಹಾಗೂ ಆರೆಸ್ಸೆಸ್ ಎರಡಕ್ಕೂ ಲಾಭವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ, ನಟ ಅಹಿಂಸಾ ಚೇತನ್ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಧಿಕಾರಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಬಿಜೆಪಿ ಪಕ್ಷವು ದ್ವೇಷದ ಸಿದ್ಧಾಂತವನ್ನು ಹೊಂದಿದೆ. ನಾವು ಮೊದಲು ಬಿಜೆಪಿಯನ್ನು ತೊಡೆದು ಹಾಕಿದರೆ, ಕಾಂಗ್ರೆಸ್ ಅದರಿಂದ ಲಾಭ ಪಡೆದು ಇನ್ನಷ್ಟು ಬಲವಾಗುತ್ತದೆ. ಕಾಂಗ್ರೆಸ್ ನ್ನು ಮೊದಲು ತೊಡೆದು ಹಾಕಿದರೆ, ಬಿಜೆಪಿ ಸಿದ್ಧಾಂತವನ್ನು ನಮ್ಮ ಸಮಾನತೆಯ ಸಿದ್ಧಾಂತದಿಂದ ಧ್ವಂಸ ಮಾಡಬಹುದು ಎಂದು ಅವರು ಅವರು ಅಭಿಪ್ರಾಯಪಟ್ಟಿದ್ದಾರೆ.
ನಟ ಅಹಿಂಸಾ ಚೇತನ್ ಅವರು ಕಾಂಗ್ರೆಸ್ ನ್ನು ಸೋಲಿಸಬೇಕು, ಬಿಜೆಪಿಯನ್ನೂ ಸೋಲಿಸಬೇಕು ಅನ್ನುತ್ತಿದ್ದಾರೆ. ಹಾಗಾದರೆ, ಯಾವ ಪಕ್ಷವನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಪ್ರಶ್ನಿಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
ಆ್ಯಂಕರ್ ಅನುಶ್ರೀ ವಿರುದ್ಧ ದಾಖಲೆ ರಹಿತ ಆರೋಪ | ಪ್ರಶಾಂತ್ ಸಂಬರ್ಗಿಯ ಬೆವರಳಿಸಿದ ಚಕ್ರವರ್ತಿ ಚಂದ್ರಚೂಡ್
ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಲಾರಿ: 6 ಮಂದಿ ಸಾವು, ಇಬ್ಬರಿಗೆ ಗಂಭೀರ ಗಾಯ
ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು, ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ: ವ್ಯಾಪಕ ಆಕ್ರೋಶ
ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ
ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ