ಮೊದಲು ಕ್ರೀಡಾಂಗಣಕ್ಕೆ ಇಟ್ಟಿರುವ ಮೋದಿ ಹೆಸರನ್ನು ಬದಲಾವಣೆ ಮಾಡಲಿ | ಸಿ.ಟಿ.ರವಿಗೆ ಸಿದ್ದರಾಮಯ್ಯ ಸವಾಲು - Mahanayaka

ಮೊದಲು ಕ್ರೀಡಾಂಗಣಕ್ಕೆ ಇಟ್ಟಿರುವ ಮೋದಿ ಹೆಸರನ್ನು ಬದಲಾವಣೆ ಮಾಡಲಿ | ಸಿ.ಟಿ.ರವಿಗೆ ಸಿದ್ದರಾಮಯ್ಯ ಸವಾಲು

siddaramaiha
07/08/2021


Provided by

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ವಿಚಾರವಾಗಿ ಸಿ.ಟಿ.ರವಿ ನೀಡಿದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಇಂದಿರಾ ಕ್ಯಾಂಟೀನ್  ಹೆಸರು ಬದಲಾವಣೆ ಮಾಡುವುದೇ ಆದರೆ, ಗುಜರಾತ್ ನಲ್ಲಿ ಕ್ರೀಡಾಂಗಣಕ್ಕೆ ಇಟ್ಟಿರುವ ಮೋದಿ ಹೆಸರನ್ನು ಮೊದಲು ಬದಲಿಸಲಿ ಎಂದು ಸವಾಲು ಹಾಕಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಲು ಯತ್ನಿಸುತ್ತಿರುವುದು, ದ್ವೇಷದ ರಾಜಕಾರಣವಾಗಿದೆ. ಗರೀಬಿ ಹಟಾವೋ ಮಾಡಿದ್ದು ಇಂದಿರಾ ಗಾಂಧಿ ಅವರು. ಹಾಗಾಗಿ ಅವರ ಹೆಸರನ್ನು ಕ್ಯಾಂಟೀನ್ ಗೆ ಇಟ್ಟಿದ್ದೇವೆ. ಅವರು ಹೆಸರು ಬದಲಾವಣೆ ಮಾಡಲಿ ಆಮೇಲೆ ನೋಡೋಣ ಎಂದು ಅವರು ಹೇಳಿದರು.

ಧ್ಯಾನ್ ಚಂದ್ ದೇಶ ಕಂಡ ಹೆಸರಾಂತ ಹಾಕಿ ಪಟು. ಅವರ ಹೆಸರನ್ನು ಬೇರೆ ಪ್ರಶಸ್ತಿಗಳಿಗೆ ಇಡಲಿ, ನನ್ನ ಅಭ್ಯಂತರವಿಲ್ಲ. ಆದರೆ, ರಾಜೀವ್ ಗಾಂಧಿ ಹೆಸರನ್ನು ಯಾಕೆ ಬದಲಾವಣೆ ಮಾಡುತ್ತೀರಿ? ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸಿ.ಟಿ.ರವಿ ಹೇಳಿದ ತಕ್ಷಣ ಹೆಸರು ಚೇಂಜ್ ಮಾಡುವುದಿಲ್ಲ.  ನಾವು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದೇವೆ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ನೋಡೋಣ  ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನಷ್ಟು ಸುದ್ದಿಗಳು…

ಶಾಕಿಂಗ್ ನ್ಯೂಸ್:  ಬ್ಲೂಟೂತ್ ಹೆಡ್ ಫೋನ್ ಸ್ಫೋಟ ಯುವಕ ದಾರುಣ ಸಾವು

ನನ್ನದು ಸ್ವಂತ ದುಡಿಮೆಯ ದುಡ್ಡು, ಹಾಗಾಗಿ ಇಡಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ | ಜಮೀರ್ ಅಹ್ಮದ್

ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ

ಅಡುಗೆ ಮಾಡುವ ವಿಚಾರದಲ್ಲಿ ಪತಿಯೊಂದಿಗೆ ಜಗಳ: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆ

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು!

ಇತ್ತೀಚಿನ ಸುದ್ದಿ