ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ಕ್ಯಾನ್ಸರ್ ಗೆ ಬಲಿ!

poonam pandey
02/02/2024

ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ(32) ಅವರು ಗರ್ಭಕೋಶದ ಕ್ಯಾನ್ಸರ್ ನಿಂದ  ನಿಧನರಾಗಿದ್ದಾರೆ ಎಂದು  ಅವರ ಮ್ಯಾನೇಜರ್  ಪೂನಂ ಪಾಂಡೆ ಅವರ ಅಧಿಕೃತ ಇನ್ಸ್ ಸ್ಟಾ ಗ್ರಾಮ್ ನಲ್ಲಿ  ಮಾಹಿತಿ ಹಂಚಿಕೊಂಡಿದ್ದಾರೆ.

ಈ ಮುಂಜಾನೆ ನಮಗೆ ಕಠಿಣವಾಗಿತ್ತು. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕೋಶದ ಕ್ಯಾನ್ಸರ್ ನಿಂದಾಗಿ ಕಳೆದುಕೊಂಡಿದ್ದೇವೆ ಎಂದು ತಿಳಿಸಲು ಬಹಳ ದುಃಖವಾಗುತ್ತಿದೆ.  ಇಂತಹ ಸಂದರ್ಭದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ಮನವಿ ಕೂಡ ಮಾಡಲಾಗಿದೆ.

ಪೂನಂ ಪಾಂಡೆ ಅವರ ಇನ್ ಸ್ಟಾ ಗ್ರಾಮ್ ಪೋಸ್ಟ್ ಸಾಕಷ್ಟು ಜನರನ್ನು ಆತಂಕಕ್ಕೆ ಸಿಲುಕಿಸಿತ್ತು.ಇದು ನಿಜವೇ? ಅಥವಾ ಕ್ಯಾನ್ಸರ್ ಕುರಿತು ಜಾಗೃತಿ ಅಭಿಯಾನವೇ ಎನ್ನುವ ಅನುಮಾನಗಳನ್ನು ಕೂಡ ಸಾಕಷ್ಟು ಜನರು ವ್ಯಕ್ತಪಡಿಸಿದರು. ಇನ್ನು ಕೆಲವರು ನಟಿಯ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದೂ ಅನುಮಾನಗೊಂಡಿದ್ದರು.

ಈ ಬಗ್ಗೆ ಪೂನಂ ಪಾಂಡೆ ಅವರ ಮ್ಯಾನೇಜ್‌ ಮೆಂಟ್ ಪಾರುಲ್ ಚಾವ್ಲಾ ಅವರನ್ನು ಸಂಪರ್ಕಿಸಿದಾಗ, ಪೂನಂ ಪಾಂಡೆ ಅವರು ತಮಗೆ ಕ್ಯಾನ್ಸರ್ ಇರುವ ಬಗ್ಗೆ ತಿಳಿದು ಕೊಂಡಾಗ ಅದು ಅಂತಿಮಘಟ್ಟದಲ್ಲಿತ್ತು. ಎಂದಿದ್ದಾರೆ. ಮತ್ತು ಪೂನಂ ಪಾಂಡೆ ಅವರ ಅಂತ್ಯಕ್ರಿಯೆಯು ಉತ್ತರ ಪ್ರದೇಶದಲ್ಲೇ ನಡೆಯಲಿದೆ ಎಂದು ಸಾವಿನ ಬಗ್ಗೆ ದೃಢಪಡಿಸಿದ್ದಾರೆ.

2013ರ ‘ನಶಾ’ ಚಿತ್ರದ ಮೂಲಕ ಪೂನಂ ಪಾಂಡೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಅವರು ಕೊನೆಯದಾಗಿ ಲಾಕ್ ಅಪ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿ

Exit mobile version