‘ಕಾರ್ಯಕ್ರಮ ಮುಗಿಯಿತು’: ಮೋದಿ ಜನ್ಮದಿನಾಚರಣೆ ಕೊವಿಡ್ ಲಸಿಕೆ ಬಗ್ಗೆ ರಾಹುಲ್ ಕಿಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶುಕ್ರವಾರ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿರುವ ವಿಷಯವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಈ ಕುರಿತು ಅವರು ‘ಕಾರ್ಯಕ್ರಮ ಮುಗಿಯಿತು’ ಎಂದು ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಕಳೆದ 10 ದಿನಗಳ ಅವಧಿಯಲ್ಲಿ ಕೋವಿಡ್ ಲಸಿಕೆ ನೀಡಿರುವುದಕ್ಕೆ ಸಂಬಂಧಿಸಿ ಕೋವಿನ್ ವೆಬ್ ಸೈಟ್‌ನಲ್ಲಿ ಲಭ್ಯವಿರುವ ಗ್ರಾಫ್ ವೊಂದನ್ನು ಅವರು ಈ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
‘ದಾಖಲೆ ಪ್ರಮಾಣದಲ್ಲಿ ಲಸಿಕೆ ನೀಡಿದ ನಂತರ, ಲಸಿಕೆ ನೀಡುವಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ ಒಂದೇ ದಿನ 2.1 ಕೋಟಿಗೂ ಅಧಿಕ ಡೋಸ್‌ಗಳಷ್ಟು ಲಸಿಕೆ ನೀಡಲಾಗಿದೆ. ದೇಶಕ್ಕೆ ಇಂತಹ ಹೆಚ್ಚು ಕಾರ್ಯಕ್ರಮಗಳ ಅಗತ್ಯವಿದೆ ಎಂದು ಅವರು ಶನಿವಾರ ಕೂಡ ಟ್ವೀಟ್ ಮಾಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!
ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು!
ಪತಿಯ ಇನ್ನೊಂದು ಮುಖ ಬಯಲಾಗುತ್ತಿದ್ದಂತೆಯೇ ನೇಣಿಗೆ ಶರಣಾದ 4 ತಿಂಗಳ ಗರ್ಭಿಣಿ
ಬೋರ್ ವೇಲ್ ನೊಳಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ದಾರುಣ ಸಾವು!
ಬಿಗ್ ಬ್ರೇಕಿಂಗ್ ನ್ಯೂಸ್: ರಾಜ್ಯದಲ್ಲಿ ಮತ್ತೊಂದು ಬೋರ್ ವೇಲ್ ದುರಂತ
ಪ್ರಧಾನಿ ಮೋದಿಗೆ ಪರ್ಯಾಯ ರಾಹುಲ್ ಅಲ್ಲ, ಮಮತಾ ಬ್ಯಾನರ್ಜಿ | ಜಾಗೋ ಬಾಂಗ್ಲಾ ವರದಿ