ಪ್ರಧಾನಿ ಮೋದಿ ಖಾತೆಗೆ ಹಣ ಹಾಕಿದ್ದಾರೆ ಎಂದು ಭಾವಿಸಿ ಖರ್ಚು ಮಾಡಿ ಜೈಲು ಸೇರಿದ ಯುವಕ! - Mahanayaka
8:14 PM Saturday 14 - December 2024

ಪ್ರಧಾನಿ ಮೋದಿ ಖಾತೆಗೆ ಹಣ ಹಾಕಿದ್ದಾರೆ ಎಂದು ಭಾವಿಸಿ ಖರ್ಚು ಮಾಡಿ ಜೈಲು ಸೇರಿದ ಯುವಕ!

modi 15 lakh
14/09/2021

ಪಾಟ್ನಾ: ಚುನಾವಣೆ ಸಂದರ್ಭದಲ್ಲಿ  ಬಿಜೆಪಿಯು ಪ್ರತಿಯೊಬ್ಬ ಭಾರತೀಯನ ಅಕೌಂಟ್ ಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರ್ಜರಿ ಪ್ರಚಾರ ಮಾಡಿತ್ತು. ಇದೀಗ ವ್ಯಕ್ತಿಯೋರ್ವ ಇದನ್ನು ನಂಬಿ ತನ್ನ ಅಕೌಂಟ್ ಗೆ ತಪ್ಪಿ ಬಂದ ಹಣವನ್ನು ಖರ್ಚು ಮಾಡಿ ಕಂಬಿ ಎಣಿಸುವಂತಾಗಿದೆ.

ಬಿಹಾರದ ಖಗರಿಯಾ ಜಿಲ್ಲೆಯ ರಂಜಿತ್ ದಾಸ್‌ ಎಂಬಾತನ ಖಾತೆಗೆ ಖಗರಿಯ ಗ್ರಾಮೀಣ ಬ್ಯಾಂಕ್  ತಾಂತ್ರಿಕ ದೋಷದಿಂದಾಗಿ 5.5 ಲಕ್ಷ ರೂಪಾಯಿ ಜಮಾ ಮಾಡಿದೆ. ಹಣ ಜಮಾವಾದ ಬ್ಯಾಂಕ್ ನ ಗಮನಕ್ಕೆ ಈ ಘಟನೆ ಬರುವಷ್ಟರಲ್ಲಿ ರಂಜಿತ್ ದಾಸ್ ಆತ ಹಣವನ್ನೆಲ್ಲ ಡ್ರಾ ಮಾಡಿಕೊಂಡಿದ್ದ.

ಆ ಬಳಿಕ ಬ್ಯಾಂಕ್ ನವರು ಪೊಲೀಸರ ಮೂಲಕ ಹಲವು ಬಾರಿ ನೋಟಿಸ್ ಕಳುಹಿಸಿ, ಹಣ ವಾಪಸ್ ನೀಡುವಂತೆ ನೋಟಿಸ್ ನೀಡಿದರೂ ಆತ ವಾಪಸ್ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಂಜಿತ್ ದಾಸ್ ನನ್ನು ಇಲ್ಲಿನ ಮಾನ್ಸಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

“ನನ್ನ ಖಾತೆಗೆ ಹಣ ಬಂದಾಗ ನಾನು ಬಹಳ ಸಂತೋಷ ಪಟ್ಟೆ.  ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಬ್ಯಾಂಕ್ ಖಾತೆಗೆ  15 ಲಕ್ಷ ರೂಪಾಯಿ ಠೇವಣಿ ಮಾಡುವ ಭರವಸೆ ನೀಡಿದ್ದರು. ಹಾಗಾಗಿ ಮೊದಲ ಕಂತಿನ ಹಣವನ್ನು ಪ್ರಧಾನಿ ನೀಡಿದ್ದಾರೆ ಎಂದು ನಾನು ಭಾವಿಸಿದ್ದೆ. ನಾನು ಹಣವನ್ನೆಲ್ಲ ಖರ್ಚು ಮಾಡಿದ್ದೇನೆ. ಈಗ ನನ್ನ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣವಿಲ್ಲ”  ಎಂದು ರಂಜಿತ್ ದಾಸ್ ಹೇಳಿದ್ದಾನೆ

ಮಾನ್ಸಿ ಸ್ಟೇಷನ್ ಹೌಸ್ ಆಫೀಸರ್ ದೀಪಕ್ ಕುಮಾರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನನ್ವಯ ರಂಜೀತ್ ನ್ನು ಬಂಧಿಸಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

rpi

ಇನ್ನಷ್ಟು ಸುದ್ದಿಗಳು…

ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು

ಹಾಸ್ಯ ನಟ ರಾಜು ತಾಳಿಕೋಟೆ ಮೇಲೆಯೂ ಹಲ್ಲೆ: ಆಸ್ಪತ್ರೆಗೆ ದಾಖಲಾಗಿರುವ ನಟ

ಎಸ್ ಬಿಐ ಗ್ರಾಹಕರಿಗೆ ಮುಖ್ಯ ಸುದ್ದಿ:  ನಾಳೆ 2 ಗಂಟೆಗಳ ಕಾಲ ಬ್ಯಾಂಕಿಂಗ್ ಸೇವೆ ಇಲ್ಲ

RPI: ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ಮತ್ತು ಪರ್ಯಾಯ ರಾಜಕಾರಣ | ತುಮಕೂರು ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ

ಆಸ್ತಿಗಾಗಿ ಸಹೋದರರ ಜಗಳ: ಕಟ್ಟಡದ ಮೇಲಿನಿಂದ ಓರ್ವ ಸಹೋದರನನ್ನು ಕೆಳಕ್ಕೆಸೆಯಲು ಯತ್ನ

ಸೋದರಳಿಯನ ಪತ್ನಿಗೆ ಹಲ್ಲೆ, ವಿಷ ಕುಡಿಸಲು ಯತ್ನ: ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಗಂಭೀರ ಆರೋಪ

ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದರೂ, ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ | ಯಡಿಯೂರಪ್ಪ

ಎನ್ ಇಪಿ ವಿರೋಧಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಕ್ಯಾಂಪಸ್ ಫ್ರಂಟ್ ಯತ್ನ | ಪೊಲೀಸರಿಂದ ಲಾಠಿ ಚಾರ್ಜ್

ಇತ್ತೀಚಿನ ಸುದ್ದಿ