ಮರಣ ಪ್ರಮಾಣ ಪತ್ರಗಳಲ್ಲಿಯೂ ಮೋದಿ ಫೋಟೋ ಹಾಕಿಸಿ | ಪ್ರಧಾನಿ ಮೋದಿ ವಿರುದ್ಧ ಮಮತಾ ಆಕ್ರೋಶ - Mahanayaka
10:35 PM Thursday 14 - November 2024

ಮರಣ ಪ್ರಮಾಣ ಪತ್ರಗಳಲ್ಲಿಯೂ ಮೋದಿ ಫೋಟೋ ಹಾಕಿಸಿ | ಪ್ರಧಾನಿ ಮೋದಿ ವಿರುದ್ಧ ಮಮತಾ ಆಕ್ರೋಶ

mamata banerjee
13/08/2021

ಪಶ್ಚಿಮ ಬಂಗಾಳ: ಮರಣ ಪ್ರಮಾಣ ಪತ್ರಗಳ ಮೇಲೆ ಕೂಡ ಪ್ರಧಾನಿ ಮೋದಿ ಫೋಟೋ ಹಾಕಿಸಿಕೊಳ್ಳಿ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದು, ಕೊವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಚಿತ್ರ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ನಿಮ್ಮ ಫೋಟೋವನ್ನು ಕಡ್ಡಾಯ ಮಾಡಿದ್ದೀರಿ. ಒಬ್ಬ ವ್ಯಕ್ತಿ ನಿಮ್ಮ ಬೆಂಬಲಿಗನಲ್ಲದಿರಬಹುದು,  ನಿಮ್ಮನ್ನು ಇಷ್ಟಪಡದೇ ಇರಬಹುದು. ಆದರೂ ನಿಮ್ಮ ಫೋಟೋವಿರುವ ಪ್ರಮಾಣ ಪತ್ರವನ್ನು ಕೊಂಡೊಯ್ಯಬೇಕು? ಇನ್ನು ಮುಂದೆ ಮರಣ ಪತ್ರದಲ್ಲಿ ಕೂಡ ನಿಮ್ಮ ಫೋಟೋವನ್ನು ಹಾಕಿಸಿಕೊಳ್ಳಬೇಕೇ? ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿ ಚಿತ್ರಗಳನ್ನು ತೆಗೆದುಹಾಕಬೇಕೆಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಇನ್ನೂ ಕೊವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋ ಬಳಕೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ,  ಕೇವಲ ಫೋಟೋ ಮಾತ್ರವಲ್ಲ, ಕೊವಿಡ್ ಸೋಂಕು ತಡೆಗಟ್ಟಲು ಬೇಕಾದ ಜಾಗೃತಿ ಮೂಡಿಸುವ ಸಂದೇಶ ಕೂಡ ಅದಲ್ಲಿದೆ. ಇದು ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡಲಾಗಿದೆ ಎಂದು ಹೇಳಿದೆ.




ಇನ್ನಷ್ಟು ಸುದ್ದಿಗಳು…

ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ

ನಾಗರ ಪಂಚಮಿ: ಕೊವಿಡ್ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆ

ತರಬೇತಿ ವೇಳೆ ಕಾನ್ಸ್ ಟೇಬಲ್ ಸಾವು | ಅಧಿಕಾರಿಗಳ ವಿರುದ್ಧ ಟೈನಿ ಕಾನ್ಸ್ ಟೇಬಲ್ ಪ್ರತಿಭಟನೆ

ಗಾಂಜಾ, ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ, ಬಿಜೆಪಿ ಸಂಸ್ಕೃತಿ | ರಾಮಲಿಂಗಾರೆಡ್ಡಿ ತಿರುಗೇಟು

ಇಳೆಯದಳಪತಿ ನಟ ವಿಜಯ್-ಎಂ.ಎಸ್.ಧೋನಿ ಭೇಟಿ | ಕಾರಣ ಏನು ಗೊತ್ತಾ?

ಇತ್ತೀಚಿನ ಸುದ್ದಿ