ಪಹಲ್ಗಮ್ ಭಯೋತ್ಪಾದಕ ದಾಳಿಯ ಭದ್ರತಾ ವೈಫಲ್ಯದ ಹೊಣೆ ಹೊತ್ತು ಮೋದಿ, ಶಾ ರಾಜೀನಾಮೆ ನೀಡಲಿ: ಬಿ.ಕೆ.ಇಮ್ತಿಯಾಜ್

ಮಂಗಳೂರು: ಪಹಲ್ಗಮ್ ಭಯೋತ್ಪಾದಕರ ಅಮಾನುಷ ಕೃತ್ಯ ದೇಶದ ಸಾರ್ವಭೌಮತೆಯ ಮೇಲೆ ನಡೆದ ದಾಳಿ ದೇಶದ ಏಕತೆಯನ್ನು ಕಾಪಾಡಿಕೊಂಡು ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಹೇಳಿದರು.
ಪಹಲ್ಗಮ್ ಭಯೋತ್ಪಾದಕ ಕೃತ್ಯ ಖಂಡಿಸಿ ಡಿವೈಎಫ್ ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಹಲ್ಗಮ್ ಪ್ರಕೃತಿ ರಮಣೀಯ ತಾಣ ಪ್ರತಿನಿತ್ಯ ಸಾವಿರಾರು ಪ್ರವಾಸಿಗಳು ವಿನೋದ ವಿಹಾರಕ್ಕಾಗಿ ಬರುತ್ತಾರೆ. ಕಾಶ್ಮೀರದ ಗಲ್ಲಿ ಗಲ್ಲಿಗಳಲ್ಲಿ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗುತ್ತದೆ. ಆದರೆ ಸಾವಿರಾರು ಪ್ರವಾಸಿಗರು ಬರುವ ಪಹಲ್ಗಮ್ ನಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸದೆ 28 ಜನರ ಅಮಾನುಷ ಹತ್ಯೆಗೆ ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದ ಅವರು, ಭದ್ರತಾ ಲೋಪಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಮಾತನಾಡಿ, ಭಯೋತ್ಪಾದಕ ದಾಳಿಯ ನಂತರ ಬಿಜೆಪಿ, ಸಂಘ ಪರಿವಾರ ತನ್ನ ತಪ್ಪನ್ನು ಮರೆಮಾಚಲು ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೊರಿಸುತ್ತಿದೆ, ಮೋದಿ ಶಾ ರಿಂದ ಗೋದಿ ಮೀಡಿಯಾಗಳು ನೈಜ ಸುದ್ದಿಗಳನ್ನು ಬಿತ್ತರಿಸದೆ ದೇಶದಲ್ಲಿ ಆರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಆದರೆ ಕಾಶ್ಮೀರದ ಜನತೆ ಒಂದಾಗಿ ಸಂಘ ಪರಿವಾರ ಮತ್ತು ಗೋದಿ ಮೀಡಿಯಾಗಳ ಸುಳ್ಳು ಮತ್ತು ಸಂಚುಗಳನ್ನು ಸೋಲಿಸಿದ್ದಾರೆ ಎಂದು ಅವರು ಹೇಳಿದರು.
ಡಿ ವೈ ಎಫ್ ಐ ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಮಾಧುರಿ ಬೋಳಾರ, ಯೋಗೀತಾ ಉಳ್ಳಾಲ, ಅಶ್ರಫ್ ಹರೇಕಳ, ರಿಯಾಜ್ ಮುಡಿಪು, ಉದಯಚಂದ್ರ ರೈ, ಜಂಷೀರ್ ಬೆಂಗ್ರೆ, ಬಿಲಾಲ್ ಬೆಂಗ್ರೆ, ನಾಸಿರ್ ಬಾಸ್,ಶ್ರೀನಾಥ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಹ ಕಾರ್ಯದರ್ಶಿ ಗಳಾದ ರಿಜ್ವಾನ್ ಖಂಡಿಗ ಸ್ವಾಗತಿಸಿ, ತಯ್ಯುಬ್ ಬೆಂಗ್ರೆ ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: