ಪ್ರಧಾನಿ ಮೋದಿಯ ಕಿವಿಯಲ್ಲಿ ಮುಸ್ಲಿಮ್ ಯುವಕ ಪಿಸುಗುಟ್ಟುತ್ತಿರುವುದೇನು? | ಕೊನೆಗೂ ಸಿಕ್ಕಿತು ಉತ್ತರ
ನವದೆಹಲಿ: ಬಂಗಾಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಮ್ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಕಿವಿಯಲ್ಲಿ ಪಿಸುಗುಟ್ಟುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಚಿತ್ರ ವೈರಲ್ ಆದ ಬೆನ್ನಲ್ಲೇ ಮುಸ್ಲಿಮ್ ಯುವಕ ಪ್ರಧಾನಿಯ ಬಳಿಯಲ್ಲಿ ಏನು ಹೇಳುತ್ತಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಶೀರ್ಷಿಕೆಗಳೊಂದಿಗೆ ಶೇರ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಮೋದಿ ಹಾಗೂ ಯುವಕನ ಸಂಭಾಷಣೆ ಏನಿತ್ತು ಎನ್ನುವುದು ಕೊನೆಗೂ ಬಯಲಾಗಿದೆ.
ಈ ಚಿತ್ರವನ್ನು ಕಂಡು ಪ್ರತಿಕ್ರಿಯಿಸಿದ್ದ ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಒವೈಸಿ, ನಾವು ಬಾಂಗ್ಲಾದೇಶದವರಲ್ಲ ಎಂದೋ ಅಥವಾ ನಾವು ಪೌರತ್ವ ಕಾನೂನ ವಿರುದ್ಧವಾಗಿದ್ದೇವೆ ಎಂದೋ, ತಾಲಕ್ ನಿಷೇಧವನ್ನು ಬೆಂಬಲಿಸುವುದಿಲ್ಲ ಎಂದೋ ಪ್ರಧಾನಿ ಮೋದಿಗೆ ತಿಳಿಸಿರಬಹುದು ಎಂದು ಹೇಳಿದ್ದರು.
ಆದರೆ ಇದೀಗ ಟೈಮ್ಸ್ ನೌ ಚಾನೆಲ್ ಫೋಟೋದಲ್ಲಿದ್ದ ಯುವಕನ ಹೆಸರು ಜುಲ್ಫಿಕರ್ ಅಲಿ ಎಂದಾಗಿದ್ದು, ಅವರ ಜೊತೆಗೆ ನಾವು ಮಾತನಾಡಿದ್ದೇವೆ. ಅವರು ಪ್ರಧಾನಿ ಮೋದಿಯ ಜೊತೆಗೆ ಏನು ಮಾತನಾಡಿದ್ದಾರೆ ಎನ್ನುವುದು ಅವರು ತಿಳಿಸಿದ್ದಾರೆ ಎಂದು ಹೇಳಿದೆ.
ಮಾಧ್ಯಮದ ವರದಿಯ ಪ್ರಕಾರ, ಜುಲ್ಫಿಕರ್ ಅಲಿ 40 ಸೆಕೆಂಡುಗಳ ಕಾಲ ಪ್ರಧಾನಿ ಜೊತೆಗೆ ಮಾತನಾಡಿದ್ದಾರೆ. “ಈ ವೇಳೆ ಪ್ರಧಾನಿ ತನ್ನ ಹೆಸರು ಕೇಳಿದರು, ನಾನು ಜುಲ್ಫಿಕರ್ ಅಲಿ ಎಂದು ಹೇಳಿದೆ. ನೀವು ಏನಾಗಬೇಕು ಎಂದು ಬಯಸಿದ್ದೀರಿ ಎಂದು ಮೋದಿ ಕೇಳಿದರು. ಆಗ ನಾನು, ಸಂಸದನೋ, ಶಾಸಕನೋ ಆಗಬೇಕು ಎಂದು ಬಯಸುವುದಿಲ್ಲ, ಆದರೆ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇನೆ ಎಂದು ಹೇಳಿದೆ. ಈ ವೇಳೆ ಮೋದಿ ನಿಮ್ಮೊಂದಿಗೆ ಫೋಟೋ ಬೇಕು ಎಂದು ಕೇಳಿದರು” ಎಂದು ಜುಲ್ಫಿಕರ್ ಅಲಿ ತಿಳಿಸಿದ್ದಾರೆ.