ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ
ಹಾವೇರಿ: ಹಣ, ಜಾತಿ ಬಲದೊಂದ ಚುನಾವಣೆ ಗೆಲ್ಲುವ ಕೆಟ್ಟ ಸಂಪ್ರದಾಯ ಕಾಂಗ್ರೆಸ್ ನಿಂದ ಆರಂಭವಾಯಿತು. ಜಾತಿಯ ವಿಷ ಬೀಜ ಬಿತ್ತುತ್ತಿದ್ದ ಕಾಂಗ್ರೆಸ್ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಧೂಳೀಪಟವಾಯಿತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಉಪಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜನರು ಸ್ವಾಭಿಮಾನದಿಂದ ಬದುಕಲು ಅಗತ್ಯವಾದ ಸವಲತ್ತು ಮತ್ತು ಯೋಜನೆಗಳನ್ನು ಬಿಜೆಪಿ ರೂಪಿಸಿದೆ. ಮೋದಿ ಸರ್ಕಾರದ ಸವಲತ್ತು ಪಡೆಯದ ಒಂದೇ ಒಂದು ಕುಟುಂಬ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಇನ್ನೂ 50 ವರ್ಷ ಕಾಂಗ್ರೆಸ್ ನವರಿಗೆ ಅಡ್ರೆಸ್ ಇರುವುದಿಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ಮೊಮ್ಮಕ್ಕಳಿಗೆ ‘ನಾವಂತೂ ಮುಳುಗಿ ಹೋಗಿದ್ದೇವೆ. ನೀವಾದರೂ ಬಿಜೆಪಿಗೆ ಸೇರಿಕೊಳ್ಳಿ’ ಎಂದು ಸಲಹೆ ನೀಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ರಾಜ್ಯದಲ್ಲಿ 378 ಕೊವಿಡ್ ಪ್ರಕರಣ ಪತ್ತೆ: 11 ಮಂದಿ ಸಾವು
ದುರ್ಗಾ ಪೂಜೆ ವೇಳೆ ಕೋಮುಗಲಭೆಗೆ ಕಾರಣವಾಗಿದ್ದ ಪ್ರಮುಖ ಆರೋಪಿ ಅರೆಸ್ಟ್!
“ಬಾಯಿ ತೊಳೆದುಕೊಳ್ಳಿ” ಎಂದು ನಳಿನ್ ಕುಮಾರ್ ಗೆ ಫಿನಾಯಿಲ್ ಪಾರ್ಸೆಲ್!
ಮಕ್ಕಳಿಗೆ ಕೊವಿಡ್ ಲಸಿಕೆ ಹಾಕಲು ಆತುರಬೇಡ: ತಜ್ಞರು ಹೀಗೆ ಹೇಳಿದ್ದೇಕೆ?
ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ
ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? | ಕೇಂದ್ರ ಸರ್ಕಾರದ ಕಿವಿ ಹಿಂಡಿದ ಸಿದ್ದರಾಮಯ್ಯ