ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು - Mahanayaka

ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು

ludiyana
02/01/2022

ಲೂಧಿಯಾನ: ಜಿಲ್ಲಾ ಶಿಕ್ಷಣ ಕಚೇರಿಗೆ ಆಗಮಿಸಿದ ಪೋಷಕರ ಗುಂಪು ಜಿಲ್ಲಾ ಶಿಕ್ಷಣ ಅಧಿಕಾರಿ ಅವರಿಗೆ ಮೊದಲು ಹೂವಿನ ಹಾರ ಹಾಕಿದರು.  ಆದರೆ ಅದರ ಬೆನ್ನಲ್ಲೇ ಚಪ್ಪಲಿ ಹಾರವನ್ನು ಹಾಕುವ ಮೂಲಕ ಅವಮಾನಿಸಿದರು.

ಹೌದು…! ಈ ಘಟನೆ ನಡೆದಿರುವುದು ಲೂಧಿಯಾನದಲ್ಲಿ. ಲಖ್ವೀರ್ ಸಿಂಗ್ ಚಪ್ಪಲಿ ಹಾರ ಹಾಕಿಸಿಕೊಂಡ ಶಿಕ್ಷಣಾಧಿಕಾರಿಯಾಗಿದ್ದಾರೆ.  ತನ್ನನ್ನು ಸನ್ಮಾನಿಸುವುದಾಗಿ ಕಚೇರಿ ಬಂದ ತಂಡ ಮೊದಲಿಗೆ ಹೂವಿನ ಹಾರ ಹಾಕಿದರು. ಅದರ ಬೆನ್ನಲ್ಲೇ  ಚಪ್ಪಲಿ ಹಾರ ಹಾಕಿ ಅವಮಾನಿಸಿದರು ಎಂದು ಅವರು ದೂರಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಶಿಕ್ಷಣಾಧಿಕಾರಿಗೆ ಶೂಗಳ ಹಾರವನ್ನು ಹಾಕಲಾಗಿದೆ. ಅಲ್ಲದೆ ಈ ಬಗ್ಗೆ ಸಾಕಷ್ಟು ದೂರು ನೀಡಿದರೂ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ರೀತಿ ವರ್ತಿಸಿದ್ದಾಗಿ ಪೋಷಕರು ಸ್ಪಷ್ಟಪಡಿಸಿದ್ದಾರೆ.

ಈ ಆರೋಪವನ್ನು ಲಖ್ವೀರ್ ಸಿಂಗ್ ತಳ್ಳಿಹಾಕಿದ್ದಾರೆ. ಅಲ್ಲದೇ, ಇದು ನಿಜವಾಗಿಯೂ ಪೋಷಕರ ಒಕ್ಕೂಟವಲ್ಲ. ಅಧಿಕಾರಿಗಳನ್ನು ಬ್ಲ್ಯಾಕ್‌ ಮೇಲ್ ಮಾಡಲು ಪ್ರಯತ್ನಿಸುತ್ತಿರುವ ಜನರ ಗುಂಪು ಎಂದು ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇವರ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ:  12 ಮಕ್ಕಳು ಸಹಿತ 50 ಮಂದಿ ಅಸ್ವಸ್ಥ

ಟಫ್ ರೂಲ್ಸ್ ಜಾರಿ ಸಾಧ್ಯತೆ: ಸುಳಿವು ನೀಡಿದ ಆರ್.ಅಶೋಕ್

“ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ ಎಲ್ ಪಿಜಿ ಗ್ಯಾಸ್”

50 ರೂಪಾಯಿ ಕದ್ದಿದ್ದಕ್ಕೆ ಮಗನನ್ನು ಥಳಿಸಿ ಕೊಂದ ತಂದೆ

ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ

ಇತ್ತೀಚಿನ ಸುದ್ದಿ