ಮಂಗಳೂರು ವಿವಿ ಆಡಳಿತ ವಿಭಾಗದ ಕುಲಸಚಿವ ಮೊಹಮ್ಮದ್ ನಯೀಮ್ ಮೊಮಿನ್ ವರ್ಗಾವಣೆ - Mahanayaka

ಮಂಗಳೂರು ವಿವಿ ಆಡಳಿತ ವಿಭಾಗದ ಕುಲಸಚಿವ ಮೊಹಮ್ಮದ್ ನಯೀಮ್ ಮೊಮಿನ್ ವರ್ಗಾವಣೆ

Naeem Momin
02/08/2023

ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ 17ನೇ ಕುಲಸಚಿವರಾಗಿ ವಾರದ ಹಿಂದಷ್ಟೇ ಅಧಿಕಾರ ಸ್ವೀಕಾರ ಮಾಡಿದ್ದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಮೊಹಮ್ಮದ್ ನಯೀಮ್ ಮೊಮಿನ್ ಅವರನ್ನು ಮತ್ತೆ ವರ್ಗಾಯಿಸಲಾಗಿದೆ.


Provided by

ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಲಹಂಕ ವಲಯದ ಜಂಟಿ ಆಯುಕ್ತರಾಗಿ ನಿಯೋಜಿಸಿ ವರ್ಗಾಯಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಮೊಮಿನ್ ಬೀದರ್ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹಾಯಕ ಆಯುಕ್ತರಾಗಿ, ವಿಧಾನ ಸೌಧದಲ್ಲಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಮೊಮಿನ್ ಅವರ ಈ ದಿಢೀರ್ ವರ್ಗಾವಣೆಗೆ ಕಾರಣ ತಿಳಿದು ಬಂದಿಲ್ಲ. ವಿವಿಯಲ್ಲಿ ಖಾಲಿಯಾಗಿರುವ ಕುಲಸಚಿವ ಹುದ್ದೆಯನ್ನು ಮುಂದಿನ ಆದೇಶದವರೆಗೆ ಪರಿಕ್ಷಾಂಗ ಕುಲಸಚಿವ ರಾಜು ಚೆನ್ನನ್ನವರ್ ಪ್ರಭಾರ ನೆಲೆಯಲ್ಲಿ ವಹಿಸಿಕೊಳ್ಳಲಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ