ಅಸ್ಪೃಶ್ಯತೆ ಜಾತಿ ತಾರತಮ್ಯ ಆಚರಿಸಲು ಎಲ್ಲಿ ಬೇಕಾದರೂ ಬರೆದಿರಬಹುದು ಆದ್ರೆ… | ನಾಗಪುರದಲ್ಲಿ ಮೋಹನ್ ಭಾಗವತ್ ಭಾಷಣ - Mahanayaka

ಅಸ್ಪೃಶ್ಯತೆ ಜಾತಿ ತಾರತಮ್ಯ ಆಚರಿಸಲು ಎಲ್ಲಿ ಬೇಕಾದರೂ ಬರೆದಿರಬಹುದು ಆದ್ರೆ… | ನಾಗಪುರದಲ್ಲಿ ಮೋಹನ್ ಭಾಗವತ್ ಭಾಷಣ

mohan bhagwat
05/10/2022

ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಆಚರಿಸುವಂತೆ ಎಲ್ಲಿ ಬೇಕಾದರೂ ಬರೆದಿರಬಹುದು. ಆದರೆ ಅದು ನ್ಯಾಯ ಸಮ್ಮತವಲ್ಲ ಎಂದು ಮನುಸ್ಮೃತಿಯಲ್ಲಿರುವ ಜಾತಿ ತಾರತಮ್ಯಗಳ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪರೋಕ್ಷ ಹೇಳಿಕೆ ನೀಡಿದ್ದಾರೆ.

ನಾಗಪುರದ ರೇಷಂಭಾಗ್ ಸ್ಮೃತಿ ಮಂದಿರ ಮೈದಾನದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, “ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳು ಅಧರ್ಮ. ಅದನ್ನು ಆಚರಿಸುವಂತೆ ಎಲ್ಲಿ ಬೇಕಾದರೂ ಬರೆದಿರಬಹುದು, ಆದರೆ ಅದು ಧರ್ಮಸಮ್ಮತವಲ್ಲ” ಎಂದಿದ್ದಾರೆ.

ಧರ್ಮದ ಸಾರ್ವಕಾಲಿಕ ಮೌಲ್ಯಗಳಾದ ಸತ್ಯ, ಕರುಣೆ, ಶುಚಿತ್ವ ಮತ್ತು ತಪಸ್ಸಿನ ಆಧಾರದ ಮೇಲೆ ನಮ್ಮ ಬದುಕು ರೂಪುಗೊಳ್ಳಬೇಕು. ನಮ್ಮ ಆಹಾರ ಕ್ರಮ ಅಥವಾ ಪೂಜಾ ಪದ್ಧತಿ ಕಾಲಕ್ಕೆ ತಕ್ಕಂತೆ ಬದಲಾಗಬಹುದು. ಆದರೆ ಧರ್ಮದ ಮೌಲ್ಯಗಳು ಸಾರ್ವಕಾಲಿಕವಾಗಿ ಉಳಿದುಕೊಳ್ಳುತ್ತವೆ ಎಂದು ಅವರು ಹೇಳಿದರು.

ಅಸ್ಪೃಶ್ಯತೆ ಮತ್ತು ಜಾತಿ ಆಧರಿತ ತಾರತಮ್ಯಗಳು ಈ ಮೌಲ್ಯಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಿಲ್ಲ. ಹೀಗಾಗಿ ಅವು ಅಧರ್ಮ ಎನಿಸಿಕೊಳ್ಳುತ್ತವೆ ಎಂದು ಮನುಸ್ಮೃತಿಯಲ್ಲಿರುವ ಜಾತಿ ತಾರತಮ್ಯಗಳ ಕುರಿತು ಪರೋಕ್ಷವಾಗಿ ಮಾತನಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ