ಎಲ್ 2 ಎಂಪುರಾನ್ ಚಿತ್ರದಲ್ಲಿ ಗುಜರಾತ್ ಗಲಭೆಯ ಉಲ್ಲೇಖ: ಕ್ಷಮೆಯಾಚಿಸಿದ ನಟ ಮೋಹನ್ ಲಾಲ್

30/03/2025
ಮಲಯಾಳಂ ನಟ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟನೆಯ ಎಲ್ 2 ಎಂಪುರಾನ್ ಚಿತ್ರದಲ್ಲಿ ಗುಜರಾತ್ ಗಲಭೆಯ ಕೆಲವು ಉಲ್ಲೇಖಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಲಪಂಥೀಯರ ವಿರೋಧದ ನಡುವೆಯೇ ಸೂಪರ್ ಸ್ಟಾರ್ ಮೋಹನ್ ಲಾಲ್ ಕ್ಷಮೆಯಾಚಿಸಿದ್ದಾರೆ.
ತಮ್ಮ ಪ್ರೀತಿಪಾತ್ರರಿಗೆ ಉಂಟುಮಾಡಿದ ನೋವಿಗೆ ವಿಷಾದಿಸುತ್ತೇನೆ ಎಂದಿರುವ ಮೋಹನ್ ಲಾಲ್, ವಿವಾದಕ್ಕೆ ಕಾರಣವಾಗಿರುವ ಚಿತ್ರದ ಕೆಲವು ಭಾಗಗಳನ್ನು ತೆಗೆದು ಹಾಕಲು ಚಿತ್ರ ನಿರ್ಮಾಣ ತಂಡ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಒಬ್ಬ ಕಲಾವಿದನಾಗಿ, ನನ್ನ ಯಾವುದೇ ಚಿತ್ರವು ಯಾವುದೇ ರಾಜಕೀಯ ಚಳುವಳಿ, ಕಲ್ಪನೆ ಅಥವಾ ಧರ್ಮದ ಬಗ್ಗೆ ದ್ವೇಷವನ್ನು ಹೊಂದಿಲ್ಲ ಎಂದು ತಿಳಿಸವುದು ನನ್ನ ಕರ್ತವ್ಯ ಎಂದು ಮೋಹನ್ ಲಾಲ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: