ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಅವಘಡ | ಯುವತಿ ಸೇರಿದಂತೆ ಇಬ್ಬರು ಸಾವು
ರಾಯಚೂರು: ಮೊಹರಂ ಹಬ್ಬದ ಆಚರಣೆಯ ವೇಳೆ ವಿದ್ಯುತ್ ತಂತಿಗೆ ಪಂಜಾ ಸ್ಪರ್ಶಗೊಂಡು ಪಂಜಾ ಹಿಡಿದಿದ್ದ ವ್ಯಕ್ತಿ ಹಾಗೂ ಕಾಲಿಗೆ ನಮಸ್ಕರಿಸುತ್ತಿದ್ದ ಮಹಿಳೆ, ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ ಎಂದು ವರದಿಯಾಗಿದೆ.
50 ವರ್ಷ ವಯಸ್ಸಿನ ಹುಸೇನಸಾಬ ದೇವರಮನಿ ಹಾಗೂ 18 ವರ್ಷ ವಯಸ್ಸಿನ ಹುಲಿಗೆಮ್ಮ ಮೃತಪಟ್ಟವರಾಗಿದ್ದಾರೆ. ಮೊಹರಂ ಕೊನೆಯ ದಿನದಂದು ಮೆರವಣಿಗೆ ನಡೆಯುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
8 ಅಡಿ ಎತ್ತರ ಇರುವ ಪಂಜಾ ಎತ್ತಿಕೊಂಡು ಹುಸೇನಸಾಬ ಹೆಜ್ಜೆ ಹಾಕುತ್ತಿದ್ದರು. ಮಾರ್ಗದಲ್ಲಿದ್ದ ವಿದ್ಯುತ್ ಕಂಬದಿಂದ ಹಾಯ್ದು ಹೋಗಿದ್ದ ತಂತಿಗಳು ಪಂಜಾಕ್ಕೆ ತಗಲಿವೆ. ಈ ವೇಳೆ ಹುಸೇನಸಾಬ ಹಾಗೂ ಅವರ ಕಾಲಿಗೆ ನಮಸ್ಕರಿಸುತ್ತಿದ್ದ ಹುಲಿಗೆಮ್ಮ ಎಂಬ ಇಬ್ಬರ ಮೇಲೆ ವಿದ್ಯುತ್ ಸ್ಪರ್ಶಗೊಂಡಿದೆ. ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೊದಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್
ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ
ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು
ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ | ಸಚಿವೆ ಶೋಭಾ ಕರಂದ್ಲಾಜೆ
ರಾಜೀವ್ ಗಾಂಧಿ 77ನೇ ಜನ್ಮ ದಿನಾಚರಣೆ: ವೀರಭೂಮಿಯಲ್ಲಿ ನಮನ ಸಲ್ಲಿಸಿ, ಕಾಲ ಕಳೆದ ರಾಹುಲ್ ಗಾಂಧಿ