ಮಹಾಕುಂಭ ಮೇಳದಲ್ಲಿ ವೈರಲ್ ಆದ ಮೊನಾಲಿಸಾಳ ಪಾಡು ಯಾರಿಗೂ ಬೇಡ! - Mahanayaka

ಮಹಾಕುಂಭ ಮೇಳದಲ್ಲಿ ವೈರಲ್ ಆದ ಮೊನಾಲಿಸಾಳ ಪಾಡು ಯಾರಿಗೂ ಬೇಡ!

monalisa
20/01/2025

ಮಹಾಕುಂಭ ಮೇಳದಲ್ಲಿ ಮಣಿ ಸರ ಮಾರಾಟ ಮಾಡುತ್ತಿದ್ದ ಹುಡುಗಿಯೊಬ್ಬಳು ತನ್ನ ಕಣ್ಣಿನ ಸೌಂದರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀವೈರಲ್ ಆಗುತ್ತಿದ್ದಾಳೆ.  ಮೊನಾಲಿಸಾ  ಎಂಬ ಈ ಹುಡುಗಿ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಕೂಡ ಆಗಿದ್ದಾಳೆ. ಆದರೆ ಇದೀಗ ಮೊನಾಲಿಸಾ(Monalisa) ಹಾಗೂ ಆಕೆಯ ಕುಟುಂಬಸ್ಥರು ಸಾರ್ವಜನಿಕರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ತಮ್ಮ ವ್ಯಾಪಾರಕ್ಕೂ ಸಮಸ್ಯೆಯಾಗುತ್ತಿದೆ.

ಈ ಹಿಂದೆ ನೆಮ್ಮದಿಯಿಂದ ಮಣಿ ಸರ ವ್ಯಾಪಾರ ಮಾಡುತ್ತಿದ್ದ ಹುಡುಗಿ ಮತ್ತು ಹುಡುಗಿಯ ಕುಟುಂಬಸ್ಥರು ಈಗ ಎಲ್ಲಿಯೂ ನೆಮ್ಮದಿಯಿಂದ ವ್ಯಾಪಾರ ಮಾಡಲು ಸಾರ್ವಜನಿಕರು ಬಿಡುತ್ತಿಲ್ಲವಂತೆ! ಹೋದಲ್ಲಿ ಬಂದಲ್ಲಿ ಎಲ್ಲ ಕಡೆಯಲ್ಲೂ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರಂತೆ.

ಇನ್ನೊಂದೆಡೆ ಯೂಟ್ಯೂಬರ್ಸ್, ಮಾಧ್ಯಮ ಸಂಸ್ಥೆಗಳು ಈ ಹುಡುಗಿಯ ಹಿಂದೆ ಬಿದ್ದಿದ್ದಾರೆ. ನಮಗೆ ಸಂದರ್ಶನ ನೀಡುವಂತೆ ಹುಡುಗಿಯ ಹಿಂದೆ ಬಿದ್ದು ಪೀಡಿಸುತ್ತಿದ್ದಾರಂತೆ. ಇವರ ಕಾಟದಿಂದ ತಪ್ಪಿಸಿಕೊಳ್ಳಲು ಹುಡುಗಿ ಮುಖಕ್ಕೆ ಮಾಸ್ಕ್ ಹಾಕಿ ತಲೆ ಕವರ್ ಮಾಡಿಕೊಂಡು ಗುರುತು ಮರೆಸಿ ಓಡಾಡುವಂತಾಗಿದೆ. ಹಾಗಿದ್ದರೂ, ಆಕೆಯ ಧ್ವನಿಯನ್ನು ಗುರುತಪಡಿಸಿಕೊಂಡು ಆಕೆಯನ್ನು ಜನ ಹಿಂಬಾಲಿಸುತ್ತಿದ್ದಾರೆ.


Provided by

ಮೊನಾಲಿಸಾಳ ಕಷ್ಟ ನೋಡಿ ಕುಟುಂಬಸ್ಥರು ಮನೆಯಲ್ಲೇ ಇರು ಎಂದಿದ್ದರು. ಆಕೆ ಮನೆಯಲ್ಲಿದ್ದರೂ, ಆಕೆಯ ಮನೆಗೆ ಜನ ಹುಡುಕಿಕೊಂಡು ಬರುತ್ತಿದ್ದಾರೆ. ಇದೀಗ ಈ ಹುಡುಗಿಗೆ ಸುರಕ್ಷತೆಯ ಸಮಸ್ಯೆ ಎದುರಾಗಿದೆ.

ಮಹಾಕುಂಭಮೇಳದಲ್ಲಿ ಇದ್ದರೆ, ಆಕೆಗೆ ಅಪಾಯ ಹೆಚ್ಚಿರುವ ಕಾರಣ ಆಕೆಯನ್ನು ಸದ್ಯ ಇಂದೋರ್ ಗೆ ಕುಟುಂಬಸ್ಥರು ಕಳುಹಿಸಿದ್ದಾರಂತೆ, ಸದ್ಯ ಮಹಾಕುಂಭ ಮೇಳದಲ್ಲಿ ವೈರಲ್ ಆಗಿದ್ದ ಹುಡುಗಿ, ಕುಂಭಮೇಳದಲ್ಲಿಲ್ಲ, ವೈರಲ್ ವಿಡಿಯೋದಿಂದಾಗಿ ಇದೀಗ ಸ್ಥಳದಿಂದಲೇ ತೆರಳುವಂತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ