ಮೂಡುಬಿದಿರೆ: ಹೋಲಿ ರೋಸರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ - ರಕ್ಷಕ ಸಂಘದ ಮಹಾಸಭೆ - Mahanayaka

ಮೂಡುಬಿದಿರೆ: ಹೋಲಿ ರೋಸರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ — ರಕ್ಷಕ ಸಂಘದ ಮಹಾಸಭೆ

moodubidre
09/08/2023

ಮೂಡುಬಿದಿರೆ : ಮೂಡುಬಿದಿರೆಯ ಹೋಲಿ ರೋಸರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕ ಸಂಘದ ಮಹಾಸಭೆಯು ಇತ್ತೀಚಿಗೆ ನಡೆಯಿತು.


Provided by

ಸಂಪನ್ಮೂಲ ವ್ಯಕ್ತಿಯಾಗಿ ಮನಶಾಸ್ತ್ರ ಪ್ರಾಧ್ಯಾಪಕ ಹಾಗೂ ಖ್ಯಾತ ಯೂಟ್ಯೂಬರ್  ಸ್ಮಿತೇಶ್ ಎಸ್. ಬಾರ್ಯ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.


Provided by

ಶಿಕ್ಷಣ ಸಂಸ್ಥೆಯು ನಾಲ್ಕು ಚಕ್ರದ ರಥ ಇದ್ದ ಹಾಗೆ ವಿದ್ಯಾರ್ಥಿ, ಪಾಲಕ, ಶಿಕ್ಷಕ, ಆಡಳಿತ ಮಂಡಳಿ ಮತ್ತು ಸಮಾಜ ಈ ನಾಲ್ಕು ವಿಭಾಗಗಳಿಂದ ಸಮಾನ ರೀತಿಯ ಆಸಕ್ತಿ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಚಿಂತೆಯನ್ನು ಬಿಟ್ಟು ಚಿಂತನೆಯ ಕಡೆ ಹೋಗಲು ನಾವೆಲ್ಲರೂ ಒಟ್ಟಾಗಿ ಸೇರಬೇಕು. ಅನೇಕ ಸಂದರ್ಭಗಳಲ್ಲಿ ಮಕ್ಕಳಿಗೆ ಪಾಲಕರೆ ಆದರ್ಶ ಪ್ರಾಯರಾಗಿರುತ್ತಾರೆ. ಬದ್ಧತೆ ನಿಷ್ಠೆ ಇವುಗಳನ್ನು ಮಕ್ಕಳು ನೋಡಿ ಅನುಸರಿಸಿ ಕಲಿಯುತ್ತಾರೆ. ಸುಸಂಸ್ಕೃತ ಜವಾಬ್ದಾರಿಯನ್ನು ಪೋಷಕರು ಅನುಸರಿಸುತ್ತಾ ಹೋದರೆ ಮಾದರಿ ಪೋಷಕರಾಗಬಹುದು ಶಿಕ್ಷಣದ ಯಶಸ್ಸಿಗೆ ಹಾಗೂ ವಿದ್ಯಾರ್ಥಿಗಳ ಬದುಕಿನ ಬಗೆಗೆ ಮಾರ್ಗದರ್ಶನ ನೀಡಿದರು.

ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಜೋಯ್ಲಿನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ  ರಕ್ಷಿತ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ  ಶ್ವೇತಾ ಇವರು ಹಿಂದಿನ ವರ್ಷ ನಮ್ಮನಗಲಿದ   ಶಿಕ್ಷಕ ರಕ್ಷಕ  ಸಂಘದ ಮಾಜಿ ಉಪಾಧ್ಯಕ್ಷರಾದ ವಿಜಯ್  ಸುವರ್ಣ ಇವರನ್ನು ಸ್ಮರಿಸಿ  ಶ್ರದ್ಧಾಂಜಲಿ ಅರ್ಪಿಸಿದರು. ಉಪನ್ಯಾಸಕಿ ಜೋವಿಟ  ನಿಶಾ ಮಿರಾಂಡ ಅತಿಥಿಗಳ ಪರಿಚಯ ನೀಡಿದರು.

ಶಿಕ್ಷಕ ರಕ್ಷಕ ಸಭೆಯ ವರದಿಯನ್ನು ಕಲಾ ವಿಭಾಗದ ಉಪನ್ಯಾಸಕಿ   ಸೀಮಾ ಪ್ರಿಯ ಡಿಸೋಜಾ ಮಂಡಿಸಿದರು. 2022- 23 ಸಾಲಿನ ದ್ವಿತೀಯ  ಪಿ ಯು ಸಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಲಾವಣ್ಯರವರು ನಡೆಸಿಕೊಟ್ಟರು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟ ಮತ್ತು  ಜಿಲ್ಲಾ ಮಟ್ಟದ ಸಾಧಕರಾದ ನಮ್ಮ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಲಾಯಿತು ಈ ಕಾರ್ಯಕ್ರಮವನ್ನು ದೈಹಿಕ ನಿರ್ದೇಶಕ ರಿತೇಶ್ ಇರಾ ಇವರು ನಿರ್ವಹಿಸಿದರು.

ಕಾಲೇಜಿನ ಆಡಳಿತಾಧಿಕಾರಿ ಭಗಿನಿ ಎಲೆನ ಎ.ಸಿ ವಿದ್ಯಾರ್ಥಿಗಳಿಗೆ ತಮ್ಮ ಹಿತವಚನ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ  ರಮಾ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಸ್ಪೂರ್ತಿದಾಯಕ ಮಾತುಗಳನಾಡಿದರು ಹಾಗೂ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಕ್ಷಕ ರಕ್ಷಕ ಸಂಘದ ಪ್ರತಿನಿಧಿ ಮೈಕಲ್ ತಾವ್ರೋ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು. ಉಪನ್ಯಾಸಕಿ ವಿಧಿಶ ವಂದಿಸಿದರು.

ವರದಿ : ಪೂರ್ಣಿಮ ಕೋಟ್ಯಾನ್ ಮಾರ್ನಾಡ್
ಹೋಲಿ ರೋಸರಿ ಪದವಿಪೂರ್ವ ಕಾಲೇಜು ಮೂಡುಬಿದಿರೆ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ