ಮೂಡಿಗೆರೆ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಬೃಹತ್ ಶಕ್ತಿ ಪ್ರದರ್ಶನ: ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

deepak doddaia
20/04/2023

ಮೂಡಿಗೆರೆ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪಕ್ಷದ ಕಚೇರಿಯಿಂದ ಮೂಡಿಗೆರೆ ಕ್ಷೇತ್ರದ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು.

ದೀಪಕ್ ದೊಡ್ಡಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಾಥ್ ನೀಡಿದರು. ಈ ವೇಳೆ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ರೋಡ್ ಶೋದಲ್ಲಿ ಭಾಗಿಯಾಗಿ ನಾಮಪತ್ರ ಸಲ್ಲಿಸಿದ ದೀಪಕ್ ದೊಡ್ಡಯ್ಯ ಅವರಿಗೆ  ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಸಿ.ಟಿ.ರವಿ,  ಮಾಜಿ ಶಾಸಕ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ, ಆಣೆ ಪ್ರಮಾಣದ ವಿಚಾರವನ್ನು ಪ್ರಸ್ತಾಪಿಸಿ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ದೋಖ ಮಾಡಿದ ವ್ಯಕ್ತಿ, ಎಚ್.ಡಿ.ಕುಮಾರಸ್ವಾಮಿಗೆ ಡೋಕ ಮಾಡದೆ ಇರ್ತಾರ ಅಂತ ಲೇವಡಿ ಮಾಡಿದರು

ಕುಮಾರಸ್ವಾಮಿ ವಿರುದ್ಧ ನೇರವಾಗಿ ಕಿಡಿಕಾರಿದ ಸಿ.ಟಿ.ರವಿ. ಬೆಕ್ಕು ಕದ್ದು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗೋದಿಲ್ವೇ,   ಮೂಡಿಗೆರೆ ಜನಕ್ಕೆ ಕಳ್ಳ ಅಂತ ಗೊತ್ತಿಲ್ವಾ?  ಮಧ್ಯಾಹ್ನ ಎಲ್ ಮಲಗಿದ್ದ,  ರಾತ್ರಿಗೆ ಎಲ್ ಮಲಗಿದ್ದ ಮೂಡಿಗೆರೆ ಜನರಿಗೆ ಗೊತ್ತು ಎಂದು ಕಿಡಿಕಾರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version