ಮೂಡಿಗೆರೆ: ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆಯ ಬೆಳಕು ಇಲ್ಲದ ಬಸ್ ನಿಲ್ದಾಣ ! - Mahanayaka
9:23 PM Thursday 26 - December 2024

ಮೂಡಿಗೆರೆ: ಎಂ.ಜಿ.ಎಂ. ಸರ್ಕಾರಿ ಆಸ್ಪತ್ರೆಯ ಬೆಳಕು ಇಲ್ಲದ ಬಸ್ ನಿಲ್ದಾಣ !

moodigere
08/09/2024

ಮೂಡಿಗೆರೆ ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಸ್ ನಿಲ್ದಾಣ ಇದೆ ಇದಕ್ಕೆ ಅಳವಡಿಸಿದ ಲೈಟ್ ಗಳು ಹಾಳಾಗಿ ಹೋಗಿ ಹಲವು ತಿಂಗಳುಗಳೇ ಕಳೆದರೂ ಇನ್ನೂ ಲೈಟ್ ಗಳನ್ನು ಅಳವಡಿಸುವ ಕೆಲಸ ನಡೆದಿಲ್ಲ.

ಬಸ್ ನಿಲ್ದಾಣದ ಲೈಟ್ ಹಾಳಾಗಿರುವುದರಿಂದ ರಾತ್ರಿ ವೇಳೆ  ಪ್ರಯಾಣಿಕರು ಬಂದರೆ, ಕತ್ತಲಲ್ಲಿ ಕುಳಿತುಕೊಳ್ಳುವಂತಾಗಿದೆ. ಮಹಿಳಾ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಆಸ್ಪತ್ರೆ ಆವರಣದಲ್ಲೇ ಇರುವ ಬಸ್ ನಿಲ್ದಾಣದಲ್ಲಿಯೇ ಈ ರೀತಿಯ ಘಟನೆ ನಡೆದರೂ, ಅಧಿಕಾರಿಗಳು ಇದನ್ನು ಗಮನಿಸದೇ ಇರುವುದು ವಿಪರ್ಯಾಸವೇ ಸರಿ.

ಸಂಬಂಧ ಪಟ್ಟ ಆಡಳಿತ ಅಧಿಕಾರಿಗಳು ಈ ನಿಲ್ದಾಣದ ಸ್ವಚ್ಛತೆ ಹಾಗೂ ಲೈಟ್ ಅನ್ನು ದುರಸ್ತಿ ಪಡಿಸುವರೆ ಕಾದುನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ