ಪೊಲೀಸ್ ಸಿಬ್ಬಂದಿಯ ಮೇಲೆಯೇ ಅನೈತಿಕ ಪೊಲೀಸ್ ಗಿರಿ! - Mahanayaka
10:12 AM Tuesday 17 - December 2024

ಪೊಲೀಸ್ ಸಿಬ್ಬಂದಿಯ ಮೇಲೆಯೇ ಅನೈತಿಕ ಪೊಲೀಸ್ ಗಿರಿ!

bantwal police
28/07/2023

ಪೊಲೀಸ್ ಸಿಬ್ಬಂದಿ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಲ್ಲಿ ನಡೆದಿದೆ.

ಜುಲೈ 27 ರ ರಾತ್ರಿ 10 ಗಂಟೆಯ ಸುಮಾರಿಗೆ ಬಿ.ಸಿ.ರೋಡಿನಿಂದ ಪೊಲೀಸ್ ವಸತಿ  ಗೃಹಕ್ಕೆ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಕುಮಾರ್ ಎಂಬುವವರು ತನ್ನ ಪತ್ನಿ ಮತ್ತು ಸಂಬಂಧಿಯನ್ನು ವಸತಿಗೃಹಕ್ಕೆ ಕಳುಹಿಸಿ ವಾಪಸ್ ಕರ್ತವ್ಯದ ಮೇರೆಗೆ ಬರುತ್ತಿದ್ದಾಗ  ಮನೀಶ್ ಮತ್ತು ಮಂಜುನಾಥ್ ಎಂಬ ಇಬ್ಬರು ವ್ಯಕ್ತಿಗಳು ಪೊಲೀಸ್ ಸಿಬ್ಬಂದಿ ಕುಮಾರ್ ಅವರನ್ನು ಅಡ್ಡಗಟ್ಟಿದ್ದಾರೆ.

ಇದೇ ವೇಳೆ ಅವರಿಬ್ಬರು ನಿನಗೆ ಯುವತಿಯರೊಂದಿಗೆ ಏನು ಕೆಲಸ ಎಂದು ಅವಾಚ್ಯ ಶಬ್ದಗಳಿಂದ  ಬೈದಿದ್ದಾರೆ. ಆಗ ಪೊಲೀಸ್ ಕುಮಾರ್ ರವರು ನಾನು ಬಿ.ಸಿ. ರೋಡಿನ ಪೊಲೀಸ್. ನನ್ನ ಜೊತೆಯಲ್ಲಿದ್ದವರು  ನನ್ನ ಪತ್ನಿ ಮತ್ತು ನಾದಿನಿ ಎಂದು ಹೇಳಿದರೂ  ಕೇಳದೆ, ನೀನು ಪೊಲೀಸ್ ಅಲ್ಲ,   ಅವಳು ನಿನ್ನ ಪತ್ನಿಯೂ ಅಲ್ಲ ಎಂದು ಹೇಳಿ, ಇದನ್ನು ನೋಡಿ ಅಲ್ಲಿಗೆ  ಬಂದ ಕುಮಾರ್ ಅವರ ಪತ್ನಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ.

ಸರಕಾರಿ ಕರ್ತವ್ಯದ ಮೇಲೆ ಹೋಗುತ್ತಿದ್ದಾಗ  ಅಡ್ಡಿ ಪಡಿಸಿದ ಇಬ್ಬರೂ ಆರೋಪಿಗಳ ಮೇಲೆ ಐ ಪಿ ಸಿ ಕಲಂ 341,504,0354(D),354(A), r)w 34 ರಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ