ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI - Mahanayaka
12:59 AM Monday 16 - September 2024

ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI

moral policing
13/10/2021

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂದು ಹೇಳುವ ಮೂಲಕ ವ್ಯಾಪಕವಾಗಿರುವ ಅನೈತಿಕ ಪೊಲೀಸ್ ಗಿರಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಮತ್ತು ಅವರ ಈ ಧೋರಣೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(Social Democratic Party of India) ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದ್ದಾರೆ.

ಸಂಘಪರಿವಾರದ ಗೂಂಡಾಗಳು ಕ್ಷುಲ್ಲಕ ನೆಪ ವೊಡ್ಡಿ ಮುಸ್ಲಿಮ್ ಯುವಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಅರ್ಬಾಝ್ ಹತ್ಯೆಯ ನಂತರ ಬಾಗಲಕೋಟೆಯಲ್ಲೂ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇಂತಹ ಸರಣಿ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿಯವರು ದುಷ್ಕರ್ಮಿಗಳಿಗೆ ಪ್ರಚೋದಿಸುವ ಮತ್ತು ಅಭಯ ನೀಡುವ ಹೇಳಿಕೆ ನೀಡಿರುವುದು ವಿಪರ್ಯಾಸವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿಯರವರು, ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದರು. ಆದರೆ ಇದೀಗ ಅವರು ರಾಜ್ಯದಲ್ಲಿ ಸಂಘಪರಿವಾರದ ಕಾರ್ಯಕರ್ತರು ನಿರಾತಂಕವಾಗಿ ನಡೆಸುತ್ತಿರುವ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುವ ಕಾರ್ಯದಲ್ಲಿ ತೊಡಗಿದ್ದು, ಇದು ಅವರ ದ್ವಿಮುಖ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಹನ್ನಾನ್ ಅಭಿಪ್ರಾಯಪಟ್ಟಿದ್ದಾರೆ.


Provided by

ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಬೇಕಾದ ಮುಖ್ಯಮಂತ್ರಿಯವರಿಗೆ ಇಂತಹ ಬೇಜವಾಬ್ದಾರಿಯ ಹೇಳಿಕೆಗಳು ಭೂಷಣವಲ್ಲ. ವಾರದ ಹಿಂದೆ ಅನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾಗಿದ್ದ ಗೂಂಡಾಗಳಿಗೆ ಠಾಣೆಯಲ್ಲೇ ಜಾಮೀನು ದೊರಕುವಂತೆ ಪ್ರಭಾವ ಹೇರಿ ಅವರನ್ನು ಬರ ಮಾಡಿಕೊಂಡ ಶಾಸಕ ಉಮಾನಾಥ್ ಕೋಟ್ಯಾನ್ ರವರ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮುಖ್ಯಮಂತ್ರಿಯವರ ಈ ಹೇಳಿಕೆ ನಾಗರಿಕರಲ್ಲಿ ಅಭದ್ರತಾ ಭಾವವನ್ನು ಉಂಟು ಮಾಡಿದೆ ಎಂದು ಅವರು ಹೇಳಿದರು.

ಸಂಘಪರಿವಾರದ ದುಷ್ಕೃತ್ಯಗಳು ರಾಜ್ಯವನ್ನು ಅರಾಜಕತೆ ಎಡೆಗೆ ಕೊಂಡೊಯ್ಯಲಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮುಖ್ಯಂತ್ರಿಯವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಬೇಕು. ಪೊಲೀಸರು ಯಾವುದೇ ರಾಜಕೀಯ ಒತ್ತಡಕ್ಕೊಳಗಾಗದೇ ಸ್ವತಂತ್ರವಾಗಿ, ದಕ್ಷವಾಗಿ ಕಾರ್ಯಾಚರಿಸುವ ವಾತಾವರಣವನ್ನು ಕಲ್ಪಿಸಿಕೊಡಬೇಕು. ಕಾನೂನಿನ ನಿಯಂತ್ರಣವಿಲ್ಲದೇ ನಿರ್ಭೀತಿಯಿಂದ ಅಪರಾಧ ಎಸಗುವ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು. ಮುಖ್ಯಮಂತ್ರಿಯವರು ಏಕಪಕ್ಷೀಯವಾಗಿ ಹೇಳಿಕೆ ನೀಡುವುದನ್ನು ಬಿಟ್ಟು, ಸಾಂವಿಧಾನಿಕ ಹುದ್ದೆಯ ಘನತೆಯನ್ನು ಅರಿತುಕೊಂಡು ವ್ಯವಹರಿಸಬೇಕು ಮತ್ತು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಅಬ್ದುಲ್ ಹನ್ನಾನ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಮಾಜಿ ಪ್ರಧಾನಿ ಮನಮೋಹನ್ ಅವರ ಆರೋಗ್ಯದಲ್ಲಿ ಏರುಪೇರು | ಏಮ್ಸ್ ಆಸ್ಪತ್ರೆಗೆ ದಾಖಲು

ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದವರು ಸಾಕ್ಷ್ಯ ನೀಡಿದ್ದಾರೆ | ನಳಿನ್ ಕುಮಾರ್ ಕಟೀಲ್

ವಸತಿ ನಿಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

“ಸಾವರ್ಕರ್ ರಾಷ್ಟ್ರಪಿತ” ಎಂದು ಬಿಜೆಪಿ ಶೀಘ್ರದಲ್ಲೇ ಘೋಷಿಸುತ್ತದೆ: ಓವೈಸಿ ಹೇಳಿಕೆ

ವೋಟ್ ಬ್ಯಾಂಕ್ ಗಾಗಿ ದಸರಾ ಹೆಸರಲ್ಲಿ ಜನರ ತೆರಿಗೆ ಹಣ ಲೂಟಿ | ಸುನೀಲ್‌ ಕುಮಾರ್ ಬಜಾಲ್ ಆರೋಪ

ಕಲೆಕ್ಷನ್ ಪಾರ್ಟಿ: ಸಲೀಂ-ಉಗ್ರಪ್ಪ ಆರೋಪಕ್ಕೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ?

ಡಿ.ಕೆ.ಶಿವಕುಮಾರ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಗುಸುಗುಸು ಮಾತು: ಕೊನೆಗೂ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಉಗ್ರಪ್ಪ

ಇತ್ತೀಚಿನ ಸುದ್ದಿ