ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ
ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ನೈತಿಕ ಪೋಲಿಸ್ ಗಿರಿ(Moral Policing) ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೋಲಿಸ್ ಇಲಾಖೆ ಮೂಕಪ್ರೇಕ್ಷಕರಾಗಿದ್ದು ಜಿಲ್ಲೆಯಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಮುಖ್ಯಮಂತ್ರಿಗಳು ಅಂತಹ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತೆ, ಭಾವನೆಗಳಿಗೆ ದಕ್ಕೆಯಾದಾಗ ಕ್ರಿಯೆಗೆ ಪ್ರತಿಕ್ರಿಯೆ ನಡೆಯುತ್ತದೆ ಎಂಬ ಹೇಳಿಕೆಯು ತೀರಾ ಖಂಡನೀಯವಾಗಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುನಿಲ್, ಸಿಎಂ ಅವರ ಹೇಳಿಕೆಯಿಂದ ಜಿಲ್ಲೆಯಲ್ಲಿ ಮತ್ತಷ್ಟು ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಘಪರಿವಾರ ತನ್ನ ಗುಪ್ತ ಅಜೆಂಡಾಗಳನ್ನು ಬಹಳ ವ್ಯವಸ್ಥಿತವಾಗಿ ಜಾರಿಗೊಳಿಸುತ್ತಿದ್ದು, ಶಿಕ್ಷಣ, ಉದ್ಯೋಗ,ಆರೋಗ್ಯ ಸೇರಿದಂತೆ ಜನರ ಬದುಕಿನ ವಿಚಾರಗಳನ್ನು ಬದಿಗೆ ಸರಿಸಿ ಕೇವಲ ಹಿಂದುತ್ವದ ಅಮಲನ್ನು ಯುವಜನತೆಯ ತಲೆಗೇರಿಸಿ ಕೋಮುದ್ವೇಷದಿಂದಲೇ ಜಿಲ್ಲೆಯ ರಾಜಕಾರಣವನ್ನು ನಿಯಂತ್ರಿಸುತ್ತಿದೆ. ಪುಂಡುಪೋಕರಿಗಳು ಕಾನೂನನ್ನು ಕೈಗೆತ್ತಿ ಅಮಾಯಕರ ಮೇಲೆ ದಾಳಿ ನಡೆಸುವ ಮೂಲಕ ಸಂಘಪರಿವಾರ ತನ್ನ ತಾಲಿಬಾನ್ ಸಂಸ್ಕ್ರತಿಯನ್ನು ಪ್ರದರ್ಶಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೈತಿಕ ಪೋಲಿಸ್ ಗಿರಿ ಕೂಡಲೇ ಮಟ್ಟ ಹಾಕಲು ಜಿಲ್ಲೆಯ ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಪರಿವರ್ತನೆ ಬಯಸುವ ಚಲನಶೀಲ ಮನುಷ್ಯರಿಗೆಲ್ಲರಿಗೂ 65ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು
ಸಂಘ ಪರಿವಾರದ ಓಲೈಕೆಗೆ ಸಿಎಂ ಬೊಮ್ಮಾಯಿ ಈ ಮಟ್ಟಕ್ಕೆ ಇಳಿಯಬಾರದಿತ್ತು | ಸಿದ್ದರಾಮಯ್ಯ ಆಕ್ರೋಶ
ಕೆಲಸ ಮುಗಿಸಿ ತೆರಳುತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳ ತಂಡದಿಂದ ಚೂರಿ ಇರಿತ!
ಹಬ್ಬದ ದಿನವೇ ಘೋರ ಕೃತ್ಯ: ಸಾಂಬರ್ ಚೆನ್ನಾಗಿಲ್ಲ ಎಂದು ತಾಯಿ, ತಂಗಿಯನ್ನು ಗುಂಡು ಹಾರಿಸಿಕೊಂಡ ಪಾಪಿ!
ಕೋಟಿಗೊಬ್ಬ-3: ಬಿಡುಗಡೆ ದಿನವೇ ಸುದೀಪ್ ಅಭಿಮಾನಿಗಳಿಗೆ ಭಾರೀ ನಿರಾಸೆ
ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI
ಕಂತ್ರಿ ನಾಯಿಗಳು ನೀವು, ಹೊಟ್ಟೆಗೆ ಏನ್ ತಿಂತೀರಾ? | ಉಗ್ರಪ್ಪಗೆ ಉಗ್ರರೂಪ ತೋರಿಸಿದ ಕಾಂಗ್ರೆಸ್ ಕಾರ್ಯಕರ್ತೆ
12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಅರೆಸ್ಟ್