ರೈಲ್ವೆ ಇಲಾಖೆಯಲ್ಲಿ 7,500 ಕ್ಕಿಂತ ಹೆಚ್ಚು ಹುದ್ದೆಗಳಿವೆ: ಅರ್ಜಿ ಸಲ್ಲಿಸೋದು ಹೇಗೆ? - Mahanayaka

ರೈಲ್ವೆ ಇಲಾಖೆಯಲ್ಲಿ 7,500 ಕ್ಕಿಂತ ಹೆಚ್ಚು ಹುದ್ದೆಗಳಿವೆ: ಅರ್ಜಿ ಸಲ್ಲಿಸೋದು ಹೇಗೆ?

railway
24/07/2024

ಕೇಂದ್ರ ಇಲಾಖೆಯ ಉದ್ಯೋಗಗಳನ್ನು ಮಾಡುಬಯಸುವಂತವರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್, ಭರ್ಜರಿ 7,951 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ.

Central Government jobs by Railway Department : ಕೇಂದ್ರ ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಇಲಾಖೆಯಲ್ಲಿ ಅಗತ್ಯವಿರುವ ಜೂನಿಯರ್ ಇಂಜಿನಿಯರ್ ಹುದ್ದೆಗಳು ಹಾಗೂ ವಿವಿಧ ವಿಭಾಗಗಳ ಸೂಪರ್ವೈಸರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಿದೆ.

ರೈಲ್ವೆ ಇಲಾಖೆಯ ಈ ಒಂದು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ನೇಮಕಾತಿಗೆ ನಿಗದಿಪಡಿಸಿರುವಂತಹ ಪ್ರಮುಖ ದಿನಾಂಕಗಳು ಹಾಗೂ ಇತರೆ ಅವಶ್ಯಕ ಮಾಹಿತಿಗಳನ್ನು ಇಲ್ಲಿ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಾಗೂ ಉದ್ಯೋಗ ನಿರೀಕ್ಷೆಯಲ್ಲಿರುವಂತಹ ಅಭ್ಯರ್ಥಿಗಳು ಈ ಲೇಖನವನ್ನು ಓದಿ ನಂತರ ಅರ್ಜಿ ಸಲ್ಲಿಸಿ.

 ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ :

ಜೂನಿಯರ್ ಎಂಜಿನಿಯರ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್, ರಾಸಾಯನಿಕ ಸೂಪರ್‌ವೈಸರ್ ಮತ್ತು ರಾಸಾಯನಿಕ ಮತ್ತು ಧಾತುವಿಜ್ಞಾನ ಸಹಾಯಕ,  ಸಂಶೋಧನೆ ಮತ್ತು ಧಾತುವಿಜ್ಞಾನ ಸೂಪರ್‌ವೈಸರ್ ಸಂಶೋಧನೆ

ಶೈಕ್ಷಣಿಕ ಅರ್ಹತೆಗಳ ವಿವರ / Educational Eligibility : ರೈಲ್ವೆ ಇಲಾಖೆಯ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಅಥವಾ ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು. ಇನ್ನುಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವರು ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 36 ವರ್ಷದ ವಯೋಮಿತಿ ಹೊಂದಿರಬೇಕು.

ವೇತನ / Pay Scale : ನೇಮಕಾತಿಯಲ್ಲಿ ಆಯ್ಕೆ ಆಗುವಂತಹ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಸಂಬಂಧಪಟ್ಟಂತೆ 36,400 ರೂಪಾಯಿಯಿಂದ 44,900 ರೂಪಾಯಿವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ ವಿವರ RRB Recruitment 2024 Application fee details :

* ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳು, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು, ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 250 ರೂಪಾಯಿಯನ್ನು ಪಾವತಿಸಬೇಕು.

* ಉಳಿದ ವರ್ಗದ ಅಭ್ಯರ್ಥಿಗಳು ಈ ನೇಮಕಾತಿಗೆ ₹500/- ಪಾವತಿಸಬೇಕು.

ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕ :

* ಆನ್ಲೈನ್ ಅರ್ಜಿ ಸಲ್ಲಿಕೆಗೆ ಆರಂಭವಾಗುವ ದಿನಾಂಕ: 30 ಜುಲೈ 2024

* ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 29 ಆಗಸ್ಟ್ 2024

ಅರ್ಜಿ ಸಲ್ಲಿಸುವ ಲಿಂಕ್: https://indianrailways.gov.in/railwayboard/view_section.jsp?lang=0&id=0,7,1281


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ