ಮೊಸಳೆಗಳು, ಹಲ್ಲಿಗಳು, ಹಾವುಗಳು: ಆತನ ಜಾಕೆಟ್, ಕಾರಿನಲ್ಲಿತ್ತು 1,700 ಜೀವಿಗಳು - Mahanayaka
5:33 PM Wednesday 5 - February 2025

ಮೊಸಳೆಗಳು, ಹಲ್ಲಿಗಳು, ಹಾವುಗಳು: ಆತನ ಜಾಕೆಟ್, ಕಾರಿನಲ್ಲಿತ್ತು 1,700 ಜೀವಿಗಳು

jose manuel perez
31/03/2022

ನ್ಯೂಯಾರ್ಕ್: ಮೊಸಳೆ, ಹಲ್ಲಿ, ಹಾವು ಸೇರಿದಂತೆ ನೂರಾರು ಸರೀಸೃಪಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕದ ಪ್ರಜೆ ಜೋಸ್ ಮ್ಯಾನುಯೆಲ್ ಪೆರೆಜ್ ಬಂಧಿತ ಆರೋಪಿ.  ಮೆಕ್ಸಿಕೋದಿಂದ ಅಮೆರಿಕಕ್ಕೆ ಕಾರಿನಲ್ಲಿ ಗಡಿ ದಾಟುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.

ಆತನ ಬಳಿ ಸುಮಾರು 1,700 ತರದ ಸರೀಸೃಪಗಳು ಪತ್ತೆಯಾಗಿವೆ.  ಜಾಕೆಟ್ ಒಳಗೆ ಹಲ್ಲಿಗಳು ಮತ್ತು ನಾಲ್ಕು ಹಾವುಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ತಪಾಸಣೆಯ ಸಮಯದಲ್ಲಿ, ಜೋಸ್,  ಕಸ್ಟಮ್ಸ್ ಅಧಿಕಾರಿಗಳಿಗೆ ತನ್ನ ಬಳಿ ಏನೂ ಇಲ್ಲ ಎಂದು ಹೇಳಿದ್ದ. ಆದರೆ  ಹಾವುಗಳ ಜಾತಿಗೆ ಸೇರಿದ ಪ್ರಾಣಿಗಳನ್ನು ಕಂಡಾಗ  ಅದು  ತಮ್ಮ ಸಾಕುಪ್ರಾಣಿಗಳು ಎಂದು ಹೇಳಿದ್ದಾನೆ.

ಕಾರಿನಲ್ಲಿ ಯುಕಾಟಾನ್ ಬಾಕ್ಸ್ ಟರ್ಟಲ್, ಮೆಕ್ಸಿಕನ್ ಬಾಕ್ಸ್ ಟರ್ಟಲ್ ಮತ್ತು ಮೆಕ್ಸಿಕನ್ ಬೀಡೆಡ್ ಹಲ್ಲಿ ಸೇರಿದಂತೆ ವಿವಿಧ ಸರೀಸೃಪಗಳನ್ನು ಸಾಗಿಸಲಾಗಿತ್ತು.  ಅವುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವುದು ಅಳಿವಿನಂಚಿನಲ್ಲಿರುವ ವೈಲ್ಡ್ ಫೋನ್ ಮತ್ತು ಫ್ಲೋರಾಗಳ ಅಂತರರಾಷ್ಟ್ರೀಯ ವ್ಯಾಪಾರದ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆರೆ ಸಿಕ್ಕಿರುವ ಎಲ್ಲಾ ಪ್ರಾಣಿಗಳ ಮೌಲ್ಯ ಅರ್ಧ ಕೋಟಿಗೂ ಹೆಚ್ಚು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚಂದ್ರಗಿರಿಯಲ್ಲಿ ಪತ್ತೆಯಾಯ್ತು 40 ಕೆ.ಜಿ. ತೂಕದ ಬೃಹತ್ ಆಮೆ

ಒಂದೇ ದೇಹ, ಎರಡು ತಲೆ ಹೊಂದಿದ ಅಪರೂಪದ ಸಯಾಮಿ ಶಿಶು ಜನನ

ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಗಾಂಜಾ ಸಹಿತ ಆರೋಪಿಯ ಬಂಧನ

ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತನಿಗೆ ಬಹಿರಂಗವಾಗಿ ಬೆದರಿಕೆಯೊಡ್ಡಿದ ಯೋಗ ಗುರು ರಾಮದೇವ್

ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ: ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಪೊಲೀಸ್‌ ವಶಕ್ಕೆ

 

ಇತ್ತೀಚಿನ ಸುದ್ದಿ