ದಲಿತರ ಕಾಲನಿ ದಾರಿಗೆ ಮಸೀದಿಯ ಭೂಮಿಯನ್ನು ಬಿಟ್ಟುಕೊಟ್ಟ ಮುಸ್ಲಿಮರು!
02/11/2020
ಮಲಪ್ಪುರಂ: ದಲಿತರ ಕಾಲನಿ ಹಾಗೂ ದೇವಸ್ಥಾನಕ್ಕೆ ಹೋಗಲು ಮಸೀದಿಯೊಂದು ತನ್ನ ಅಧೀನದಲ್ಲಿದ್ದ ಜಾಗವನ್ನು ಬಿಟ್ಟುಕೊಟ್ಟ ಸೌಹಾರ್ದಯುತ ಘಟನೆ ಮಲಪ್ಪುರಂ ಮುದುವಲ್ಲೂರ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಬೆಟ್ಟವೊಂದರಲ್ಲಿ ದಲಿತ ಕುಟುಂಬಗಳು ವಾಸಿಸುತ್ತಿದ್ದವು. ಈ ಕಾಲನಿಗೆ ಹೋಗಲು ಸರಿಯಾದ ದಾರಿ ವ್ಯವಸ್ಥೆಗಳಿರಲಿಲ್ಲ. ಹೀಗಾಗಿ ನಮಗೆ ಇಲ್ಲಿನ ಕೋಝಿಕೋಡನ್ ಮುಚಿಂತದಂ ಭಗವತಿ ದೇವಸ್ಥಾನ ಹಾಗೂ ನಮ್ಮ ಕಾಲನಿಗೆ ಹೋಗಲು ದಾರಿ ನೀಡುವಂತೆ ದಲಿತರು ಮಸೀದಿಯ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು.
ಈ ಮನವಿಗೆ ಒಪ್ಪಿದ ಮಸೀದಿಯು, ಉಚಿತವಾಗಿ ತನ್ನ ಅಧೀನದಲ್ಲಿದ್ದ ಜಾಗವನ್ನು ಬಿಟ್ಟುಕೊಡುವ ಮೂಲಕ ಇಸ್ಲಾಂ ಧರ್ಮದ ತತ್ವವನ್ನು ಪಾಲಿಸಿ ಮಾದರಿಯಾಗಿದೆ. ಸ್ಥಳೀಯ ವಾರ್ಡ್ ಪಂಚಾಯತ್ ಸದಸ್ಯ ಅಹಮದ್ ಸಘೀರ್ ನೆರವಿನಿಂದ, ಪಂಚಾಯತ್ ವತಿಯಿಂದ ಮಸೀದಿ ದಾನ ಮಾಡಿದ ದಾರಿಗೆ ಮೆಟ್ಟಿಲುಗಳನ್ನು ಕಟ್ಟಿಸಿಕೊಡಲಾಗಿದೆ..