ಮಗುವಿಗೆ ಅಮ್ಮಳಾದ ಮಹಾತಾಯಿ: ಮಕ್ಕಳಿಗೆ ಎದೆಹಾಲು ಉಣಿಸಲು ಮುಂದಾದ ದಂಪತಿಗೆ ಶಹಬ್ಬಾಸ್
ಮಗುವಿಗೆ ಎದೆಹಾಲಿನ ಅಗತ್ಯ ಇದ್ದರೆ ತಿಳಿಸಿ. ನನ್ನ ಪತ್ನಿ ಎದೆಹಾಲು ಉಣಿಸಲು ಸಿದ್ಧವಾಗಿದ್ದಾಳೆ ಎಂಬ ಸಂದೇಶವನ್ನು ನಿನ್ನೆ ಕೇರಳದ ಅಝೀಝ್ ಎಂಬ ಸಾಮಾಜಿಕ ಕಾರ್ಯಕರ್ತ ವಾಟ್ಸಪ್ ನಲ್ಲಿ ಹಂಚಿಕೊಂಡಿದ್ದರು. ವಯನಾಡ್ ದುರಂತದ ಹಿನ್ನೆಲೆಯಲ್ಲಿ ಹಂಚಿಕೊಂಡ ಈ ಸಂದೇಶವು ಕೇರಳದ ಜನರ ಮನಸೆಳೆದಿದೆ. ಈ ದಂಪತಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ಈ ಸುದ್ದಿಯನ್ನು ಮೊದಲ ಬಾರಿ ಕೇರಳದ ಮಾಧ್ಯಮಂ ದಿನಪತ್ರಿಕೆಯು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಆ ಬಳಿಕ ಇತರ ಮಾಧ್ಯಮಗಳು ಅದನ್ನು ಪಡೆದುಕೊಂಡವು. ಯೂತ್ ಲೀಗ್ ನ ರಾಷ್ಟ್ರೀಯ ಉಪಾಧ್ಯಕ್ಷೆ ಮುಫೀದ ತಸ್ನಿ ಅವರು ಆ ದಂಪತಿಯ ಚಿತ್ರವನ್ನ ಹಂಚಿಕೊಂಡಿದ್ದಾರೆ.
ಆಝೀಝ್ ಮತ್ತು ಪತ್ನಿ ಶಾಲಿಬಾ ಎಂಬುವವರು
ಪುಟ್ಟ ಮಕ್ಕಳಿದ್ದರೆ ಎದೆಹಾಲು ಉಣಿಸಲು ಸಿದ್ಧ ಎಂದು ಹೇಳಿರುವ ದಂಪತಿ ಎಂದು ಅವರು ಬರೆದಿದ್ದಾರೆ. ವಯನಾಡ್ ವೆಲ್ಲ ಮುಂಡ ಎಂಬ ಪ್ರದೇಶದ ಈ ಅಝೀಝ್ ಆ ಜಿಲ್ಲೆಯ ಸೇವಾ ಕಾರ್ಯಕರ್ತರಿರುವ ವಾಟ್ಸಪ್ ಗ್ರೂಪಿನಲ್ಲಿಈ ಸಂದೇಶವನ್ನು ಹಂಚಿಕೊಂಡಿದ್ದರು.
ತಾನು ದುರಂತ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಭೀಕರ ಸ್ವರೂಪ ಮನಸ್ಸನ್ನು ಕಳಕಿತ್ತು, ಬಳಿಕ ಪತ್ನಿಯಲ್ಲಿ ಬಂದು ಘಟನೆಯನ್ನು ಹೇಳಿದೆ, ಮೊಲೆಹಾಲು ಯಾರಿಗಾದರೂ ಅಗತ್ಯ ಇದ್ದರೆ ನಾನು ನೀಡುವೆ ಎಂದು ಆಕೆ ನನ್ನಲ್ಲಿ ಹೇಳಿದಳು ಎಂದು ಅಜೀಝ್ ಪತ್ರಿಕೆಯೊಂದಿಗೆ ಅನುಭವ ಹಂಚಿಕೊಂಡಿದ್ದಾರೆ. ಎಂಟು ತಿಂಗಳ ಹಲೀಮ ಎಂಬ ತನ್ನ ಮೂರನೇ ಮಗುವಿಗೆ ಈ ತಾಯಿ ಈಗಾಗಲೇ ಎದೆಹಾಲು ಉಣಿಸುತ್ತಿದ್ದಾರೆ. ಸಾಕಷ್ಟು ಮಂದಿ ತಾಯಂದಿರು ಎದೆಹಾಲು ಉಣಿಸುವುದಕ್ಕೆ ಮುಂದೆ ಬರುವುದಕ್ಕೆ ತನ್ನ ಸಂದೇಶ ಕಾರಣವಾಯಿತು ಎಂಬ ಹೆಮ್ಮೆ ಅವರಿಗೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth