ತನ್ನ ಮಗುವನ್ನು ಹತ್ಯೆ ಮಾಡಲು ತಾಯಿ ಮುಂದಾಗಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ - Mahanayaka

ತನ್ನ ಮಗುವನ್ನು ಹತ್ಯೆ ಮಾಡಲು ತಾಯಿ ಮುಂದಾಗಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್

27/02/2025

ತನ್ನ ಮಗುವನ್ನು ಹತ್ಯೆ ಮಾಡಲು ಅಥವಾ ತೊಂದರೆಗೆ ಒಳಪಡಿಸಲು ತಾಯಿ ಮುಂದಾಗಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಏಳು ವರ್ಷದ ಮಗುವಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ 28 ವರ್ಷದ ಯುವತಿಗೆ ಮತ್ತು ಆಕೆಯ ಸಂಗಾತಿಗೆ ಜಾಮೀನು ನೀಡುತ್ತಾ, ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ದೂರುದಾರನಾದ ತಂದೆ ಮತ್ತು ಆರೋಪಿಯಾದ ತಾಯಿಯ ನಡುವಿನ ತಗಾದೆಗೆ ಮಗುವನ್ನು ಬಲಿ ಮಾಡುವುದು ಸಲ್ಲ ಎಂದು ಕೂಡ ನ್ಯಾಯಾಧೀಶ ಮಿಲಿಂದ್ ಅಧ್ಯಕ್ಷರಾಗಿರುವ ಪೀಠ ಅಭಿಪ್ರಾಯಪಟ್ಟಿದೆ.

ಮಗುವನ್ನು ದೈಹಿಕವಾಗಿ ಪೀಡಿಸಲಾಗಿದೆ ಮತ್ತು ಹತ್ಯೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಪತಿ ತನ್ನ ಪತ್ನಿಯ ಮೇಲೆ ಆರೋಪ ಹೊರಿಸಿದ್ದರು. ಆಕೆಯ ಹೊಸ ಸಂಗಾತಿ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪತಿ ದೂರು ನೀಡಿದ್ದರು. 2019 ರಿಂದ ಪತಿ ಪತ್ನಿಯಿಂದ ದೂರವಾಗಿದ್ದಾರೆ.

ದೂರಿನ ಆಧಾರದಲ್ಲಿ 2023 ಸೆಪ್ಟೆಂಬರ್ ನಲ್ಲಿ ಪತ್ನಿಯನ್ನು ಬಂಧಿಸಲಾಗಿತ್ತು. ಆದರೆ ಆರೋಪ ಸತ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ. ತನ್ನದೇ ಮಗುವನ್ನು ತೊಂದರೆಗೊಳಪಡಿಸಲು ಯಾವುದೇ ತಾಯಿ ಸಿದ್ದವಾಗಲಾರರು ಎಂದು ನ್ಯಾಯಾಲಯ ಹೇಳಿದೆ. ಆಕೆಯನ್ನು ಬಂಧಿಸಿದ ಪೊಲೀಸ ಅದಕ್ಕೆ ತಕ್ಕ ಕಾರಣವನ್ನು ಹೇಳಿಲ್ಲ ಎಂದು ಕೂಡ ಕೋರ್ಟ್ ಸಮಾಧಾನ ವ್ಯಕ್ತಪಡಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ