ವಂಚನೆ ಮಾಡಿದ್ದಾಳೆಂದು ಪುತ್ರಿ ವಿರುದ್ದವೇ ಕೇಸ್ ಹಾಕಿದ ತಾಯಿ..!
ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 1 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 25 ಲಕ್ಷ ರೂಪಾಯಿ ಗೃಹ ಸಾಲ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೀಟಾ ಪೇರಿಸ್ ಎಂಬುವವರು ನೀಡಿದ ದೂರಿನಲ್ಲಿ ತನ್ನ ಪುತ್ರಿ ನಿಖಿತಾ ಪೇರಿಸ್ ಮತ್ತು ಇನ್ನೋರ್ವ ಗೋಡ್ವಿನ್ ಫೆರ್ನಾಂಡಿಸ್ ಆರೋಪಿಗಳು ಎಂದು ದೂರಿದ್ದಾರೆ.
ರೀಟಾ ಪೇರಿಸ್ ಮತ್ತವರ ಪುತ್ರ ಅಮಿತ್ ಪೇರಿಸ್ ವಿದೇಶದಲ್ಲಿದ್ದಾರೆ. ರೀಟಾ ಪೇರಿಸ್ ರ ಪುತ್ರಿ ನಿಕಿತಾ ಪೇರಿಸ್ ಮುದರಂಗಡಿಯ ಗೋಡ್ವಿನ್ ಪೆರ್ನಾಂಡಿಸ್ ಎಂಬಾತನ ಜತೆ ಸೇರಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.
ರೀಟಾ ಪೇರಿಸ್, ಅಮಿತ್ ಪೇರಿಸ್ ಮತ್ತು ನಿಕಿತಾ ಪೇರಿಸ್ ಹೆಸರಿನಲ್ಲಿ ಮಂಗಳೂರು ಬಿಜೈನಲ್ಲಿದ್ದ ಅಪಾರ್ಟ್‌ಮೆಂಟ್‌ನ್ನು ರೀಟಾ ಪೇರಿಸ್ ಮತ್ತು ಅಮಿತ್ ಪೇರಿಸ್ ಅವರು ನಿಕಿತಾ ಪೇರಿಸ್ ಗೆ ಜಿಪಿಎ ನೀಡಿದಂತೆ ಉಡುಪಿಯ ವಕೀಲರಿಂದ ನಕಲಿ ಜಿಪಿಎ ತಯಾರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ರೀಟಾ ಪೇರಿಸ್ ಮತ್ತು ಅಮಿತ್ ಪೇರಿಸ್ ಅವರ ನಕಲಿ ಸಹಿ ಮಾಡಿ ಬ್ಯಾಂಕ್ ಮ್ಯಾನೇಜರ್ ಗೆ ದಾಖಲಾತಿಗಳನ್ನು ನೀಡಿ ಫ್ಲ್ಯಾಟಿನ ಮೇಲೆ 25 ಲಕ್ಷ ಗೃಹಸಾಲ ಪಡೆದಿದ್ದಾರೆ. ಬಳಿಕ ನಕಲಿ ಸಹಿ ಮಾಡಿದ ದಾಖಲೆಯನ್ನು ನೀಡಿ ವಾಮಂಜೂರಿನ ಬ್ಯಾಂಕ್ ಖಾತೆಯ ಲಾಕರ್ ನಲ್ಲಿದ್ದ ರೀಟಾ ಪೇರಿಸ್‌ಗೆ ಸೇರಿದ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಕಲಿ ಸಹಿ ಮಾಡಿ ರೀಟಾ ಪೇರಿಸ್ ರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೋಗಿ ವಂಚಿಸಿದ್ದಾರೆ ಎಂದು ದೂರಲಾಗಿದೆ. ಅದರಂತೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka