ಮಗ ಕೆಟ್ಟ ಸ್ನೇಹಿತರ ಸಹವಾಸ ಮಾಡಿದ್ದಕ್ಕೆ ಬೈಕ್ ಮಾರಾಟ ಮಾಡಿದ ತಾಯಿ: ಬಾಲಕ ಸಾವಿಗೆ ಶರಣು

ಮೀರತ್: ತಾಯಿ ಹಾಗೂ ಅಣ್ಣ ಬೈಕ್ ಮಾರಾಟ ಮಾಡಿದ್ದಕ್ಕೆ ಬಾಲಕನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಬಾಲಕನ ತಾಯಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಜ.12ರಂದು ರಾತ್ರಿ 8 ಗಂಟೆಯ ಸುಮಾರಿಗೆ ತಾಯಿ ತನ್ನ ಹಿರಿಯ ಮಗನೊಂದಿಗೆ ಮನೆಗೆ ಮರಳಿದ್ದರು. ಈ ವೇಳೆ ಕಿರಿಯ ಮಗ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ. ಸ್ವಲ್ಪ ಸಮಯದ ಬಳಿಕ ತನ್ನ ರೂಮ್ ಗೆ ತೆರಳಿ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಸಾವಿಗೂ ಮುನ್ನ, ಸತ್ತ ಬಳಿಕ ಆತ್ಮ ಏನಾಗುತ್ತದೆ ಎಂದು ಆತ ಸರ್ಚ್ ಮಾಡಿದ್ದ ಎನ್ನಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಅನಾರೋಗ್ಯದ ಕಾರಣ ಪತಿಯನ್ನು ಕಳೆದುಕೊಂಡಿದ್ದ ತಾಯಿ, ಇಬ್ಬರು ಮಕ್ಕಳನ್ನು ಚೆನ್ನಾಗಿ ಸಾಕಿದ್ದರು. ಕಿರಿಯ ಮಗ ಸ್ನೇಹಿತರಿಂದಾಗಿ ದಾರಿ ತಪ್ಪುತ್ತಿರುವುದು ಕಂಡು ತಾಯಿ ಚಿಂತೆಗೀಡಾಗಿದ್ದರು. ಹೀಗಾಗಿ ಆತನ ಬುಲೆಟ್ ಬೈಕ್ ನ್ನು ಮಾರಾಟ ಮಾಡಿದ್ದರು. ಆದರೆ ತಾಯಿ ಉದ್ದೇಶ ಅರಿಯದೇ ಬಾಲಕ ಸಾವಿಗೆ ಶರಣಾಗಿದ್ದಾನೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: