ತನ್ನ ಕೋಳಿ ಮೊಟ್ಟೆ ಇಡುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ವ್ಯಕ್ತಿ - Mahanayaka
9:17 AM Tuesday 24 - December 2024

ತನ್ನ ಕೋಳಿ ಮೊಟ್ಟೆ ಇಡುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

chiken
21/04/2021

ಪುಣೆ: ಕೋಳಿ ಸಾಕಾಣೆ ಮಾಡುತ್ತಿರುವ ವ್ಯಕ್ತಿಯೋರ್ವ, ತನ್ನ ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಕಂಪೆನಿಯೊಂದರ ಮೇಲೆ ದೂರು ದಾಖಲಿಸಿದ್ದಾರೆ.

ಪುಣೆಯ ಅಹ್ಮದ್ ​ನಗರದ ಕೋಳಿ ಆಹಾರ ಉತ್ಪಾದನಾ ಕಂಪನಿಯ ವಿರುದ್ಧ ವ್ಯಕ್ತಿ ದೂರು ದಾಖಲಿಸಿದ್ದು, ಈ ಘಟಕದಿಂದ ತಂದ ಆಹಾರಗಳನ್ನು ಕೋಳಿಗೆ ನೀಡಿದ ಬಳಿಕ ಕೋಳಿಗಳು ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ವ್ಯಕ್ತಿ ಆರೋಪಿಸಿದ್ದಾರೆ.

ಇನ್ನೂ ಆರೋಪ ಕೇಳಿ ಬರುತ್ತಿದ್ದಂತೆಯೇ ಪೊಲೀಸರು ಅಹ್ಮದ ನಗರ ಪಶುಸಂಗೋಪನಾ ಅಧಿಕಾರಿಯನ್ನು ಭೇಟಿ ಮಾಡಿದ್ದು, ಈ ಆಹಾರಗಳಲ್ಲಿರುವ ದೋಷವನ್ನು ಪರೀಕ್ಷೆ ನಡೆಸಿದ್ದಾರೆ. ಈ ವೇಳೆ, ಕಂಪೆನಿ ಉತ್ಪಾದಿಸುತ್ತಿರುವ ಆಹಾರ ಕೆಲವು ತಳಿಗಳ ಕೋಳಿಗಳಿಗೆ ಸರಿ ಹೊಂದುವುದಿಲ್ಲ ಎಂದು ತಿಳಿದು ಬಂದಿದೆ.

ಇನ್ನೂ ಆರೋಪ ಕೇಳಿ ಬರುತ್ತಿದ್ದಂತೆಯೇ  ಪುಣೆಯ ಆಹಾರ ಸಂಸ್ಥೆ ಸಂತ್ರಸ್ತ ವ್ಯಕ್ತಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ. ಕಂಪೆನಿಯ ವಿರುದ್ಧ ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ.

ಇತ್ತೀಚಿನ ಸುದ್ದಿ