ಮೊಟ್ಟೆ ಯೋಜನೆ ಕೈ ಬಿಡದಿದ್ದರೆ, ಬೀದಿಗಿಳಿದು ಹೋರಾಟ: ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ
ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಹಿಂಪಡೆಯದಿದ್ದರೆ, ಕಠಿಣ ಹೋರಾಟ ನಡೆಸುವುದಾಗಿ ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಸಂತರ ಮೂಲಕ ಎಚ್ಚರಿಕೆ ನೀಡಲಾಗಿದೆ.
ಅನೇಕ ಸರ್ಕಾರ ಕೈಬಿಟ್ಟ ಮೊಟ್ಟೆ ಯೋಜನೆಯನ್ನು ಲಿಂಗಾಯತ ಸಿಎಂ ಆಗಿದ್ದರೂ, ಜಾರಿಗೊಳಿಸಿದ್ದು ತಪ್ಪು, ದೇಶವನ್ನೇ ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡುವ ಬಿಜೆಪಿ ನಾಯಕರೆ ಗಮನಕೊಡಿ, ಆರೆಸ್ಸೆಸ್ ನಾಯಕರೇ ಗಮನ ಕೊಡಿ. ಎಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ ಸಂತರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರಕ್ಕಿಂತ ಮೊದಲು ಮಠಗಳು ಅಕ್ಷರ ದಾಸೋಹ ನೀಡಿವೆ. ಇನ್ನು ಮೇಲೆ ಬೀದಿಗಿಳಿದು ಹೋರಾಟಕ್ಕೆ ನಿರ್ಧರಿಸಿದ್ದೇವೆ. ನೀವು ಶಾಲೆಗಳನ್ನು ಮೊಟ್ಟೆ ಯೋಜನೆ ಕೈ ಬಿಡದೇ ಹೋದರೆ, ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ, ಅಂಗನವಾಡಿ ತೆರೆಯಬೇಕು. ಡಿಸೆಂಬರ್ 20ರಂದು ಬೆಳಗಾವಿಯಲ್ಲಿ ಸಸ್ಯಹಾರಿಗಳ ಹೋರಾಟ ನಡೆಯಲಿದೆ ಎಂದು ತಿಳಿಸಿದೆ.
ಮೊಟ್ಟೆ ಕೊಡುವುದಿದ್ದರೆ, ಮನೆಗೆ ಕೊಟ್ಟು ಕಳುಹಿಸಿ, ಮೊಟ್ಟೆಗಿಂತಲೂ ಪೌಷ್ಠಿಕಾಂಶ ಇರೋ ಆಹಾರ ನೀಡಿ, ಶಾಲೆಯಲ್ಲಿ ಇದೆಲ್ಲ ಬೇಡ, ಶಾಲೆ ಎಲ್ಲರ ಸೊತ್ತು ಎಂದು ಸರ್ಕಾರದ ಮೊಟ್ಟೆ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ವಿಶ್ವಪ್ರಾಣಿ ಕಲ್ಯಾಣ ಸಂಸ್ಥೆ ಅಧ್ಯಕ್ಷ ದಯಾನಂದ ಸ್ವಾಮೀಜಿ, ಚೆನ್ನಬಡವಾನಂದ ಸ್ವಾಮೀಜಿ ಭಾಗಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | ಡೆತ್ ನೋಟ್ ಆಧಾರದಲ್ಲಿ ಓರ್ವ ಮಹಿಳೆ ಪೊಲೀಸ್ ವಶಕ್ಕೆ
ಬಿಪಿನ್ ರಾವತ್ ಸೇರಿದಂತೆ 9 ಮಂದಿಯಿದ್ದ ಸೇನಾ ವಿಮಾನ ಪತನ: ನಾಲ್ವರ ಮೃತದೇಹ ಪತ್ತೆ, ಮೂವರ ಸ್ಥಿತಿ ಗಂಭೀರ
ಕೊವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮ: ಸಿಎಂ ಬೊಮ್ಮಾಯಿ ಹೇಳಿದ್ದೇನು?
ನನ್ನ ಅಸಮಾಧಾನ ‘ಮೋದಿಯ ನೀತಿ’ಗಳ ವಿರುದ್ಧ, ಬಿಜೆಪಿಯ ವಿರುದ್ಧವಲ್ಲ | ಮಂಗಳೂರಿನಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿಕೆ
ಸರ್ಕಾರಿ ಶಾಲೆಗಳ ಹೀನಾಯ ಸ್ಥಿತಿಯ ಬಗ್ಗೆ ಧ್ವನಿ ಎತ್ತದ ಸ್ವಾಮೀಜಿಗಳು ಮೊಟ್ಟೆಗೆ ವಿರೋಧ ಮಾಡ್ತಿದ್ದಾರೆ!