ಮೊಟ್ಟೆ ವಿಚಾರ: ಧ್ವಜಾರೋಹಣಕ್ಕೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಮುತ್ತಿಗೆ ಹಾಕಿದ ಮಹಿಳೆಯರು!
ವಿಜಯಪುರ: ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಸಚಿವ ಶಶಿಕಲಾ ಜೊಲ್ಲೆ ಧ್ವಜಾರೋಹಣ ನಡೆಸಬಾರದು ಎಂದು ಆಗ್ರಹಿಸಿ ಮಹಿಳೆಯರು ಮುತ್ತಿಗೆಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಿಂದ ವರದಿಯಾಗಿದೆ.
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಧ್ವಜಾರೋಹಣ ನಡೆಸಲು ಮಹಿಳಾ ವಿಶ್ವವಿದ್ಯಾಲಯದ ಆವರಣಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಜೊಲ್ಲೆಗೆ ಮಹಿಳೆಯರು ಶಾಕ್ ನೀಡಿದ್ದು, ಸಚಿವೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.
ಬಸವನನಾಡಿನಲ್ಲಿ ಭ್ರಷ್ಟರಿಗೆ ಧ್ವಜಾರೋಹಣಕ್ಕೆ ಬಿಡುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದು ಸಚಿವೆ ಜೊಲ್ಲೆಗೆ ಧಿಕ್ಕಾರ ಕೂಗಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರತಿಭಟನಾ ನಿರತ ಮಹಿಳೆಯರನ್ನು ವಶಕ್ಕೆ ಪಡೆದು, ಸಚಿವೆ ಜೊಲ್ಲೆಗೆ ಧ್ವಜಾರೋಹಣ ನಡೆಸಲು ಅನುವು ಮಾಡಿಕೊಟ್ಟರು. ಸ್ಥಳೀಯರ ವಿರೋಧದ ನಡುವೆಯೇ ಸಚಿವರು ಧ್ವಜಾರೋಹಣ ನಡೆಸಿದರು.
ಇನ್ನಷ್ಟು ಸುದ್ದಿಗಳು…
“ಬಿಜೆಪಿಯು ದಲಿತರ ಪರವಾಗಿದೆ ಅನ್ನಿಸುತ್ತಿದೆ” | “ಸದಾಶಿವ ಆಯೋಗ ವರದಿ ಜಾರಿ ಮಾಡಿ”
ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ | ನಾ ದಿವಾಕರ
ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರ ಮೇಲೆ ಪ್ರವಹಿಸಿದ ವಿದ್ಯುತ್: ಓರ್ವ ಬಾಲಕನ ದಾರುಣ ಸಾವು
ಎಸ್ ಸಿ-ಎಸ್ ಟಿಗಳ ಜಾತಿ ನಿಂದನೆ ಮಾಡಿದ ನಟಿ ಅರೆಸ್ಟ್: ಬಂಧನದ ವೇಳೆ ನಟಿಯಿಂದ ಹೈಡ್ರಾಮಾ
ಎಲ್ಲಾ ಜಾತಿಯವರೂ ಅರ್ಚಕ ಹುದ್ದೆ ಪಡೆಯಲು ಅರ್ಹರು: ಕ್ರಾಂತಿಕಾರಿ ಹೆಜ್ಜೆಯಿಟ್ಟ ಎಂ.ಕೆ.ಸ್ಟ್ಯಾಲಿನ್
ಹಿಂದಿನ ನಿಯಮಗಳೇ ಮುಂದುವರಿಕೆ: ಪಾಸಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ನಿರ್ಧಾರ | ಸಿಎಂ ಬೊಮ್ಮಾಯಿ