ಚಿತ್ರೀಕರಣಕ್ಕೆ ನಿರ್ಮಿಸಿದ ಮನೆಯನ್ನು ಮೀನುಗಾರರಿಗೆ ನೀಡಲು ಮುಂದಾದ ನಟ ಸೂರ್ಯ
ಚೆನ್ನೈ: ನಟ ಸೂರ್ಯ ಹೊಸ ಚಿತ್ರಕ್ಕಾಗಿ ಸಿದ್ಧಪಡಿಸಿದ ಮನೆಗಳನ್ನು ಬಳಕೆಯ ನಂತರ ಮೀನುಗಾರರಿಗೆ ಹಸ್ತಾಂತರಿಸುವ ಮೂಲಕ ಮಾದರಿಯಾಗಿದ್ದಾರೆ.
ನಟ ಸೂರ್ಯ ಕೇವಲ ಸಿನಿಮಾದಲ್ಲಿ ಮಾತ್ರವೇ ಹೀರೋ ಅಲ್ಲ. ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಮಾಜ ಸೇವೆಯಲ್ಲಿ ನಾಯಕ ಇದೀಗ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಾಲಾ ನಿರ್ದೇಶನದ ಹೊಸ ಚಿತ್ರಕ್ಕೆ ನಿರ್ಮಿಸಿರುವ ಮನೆಗಳನ್ನು ಮೀನುಗಾರರಿಗೆ ನೀಡುವುದಾಗಿ ಅವರು ಹೇಳಿದ್ದಾರೆ. ಈ ಚಿತ್ರವು ಸಮುದ್ರದ ಹಿನ್ನೆಲೆಯ ಕಥೆಯನ್ನು ಹೊಂದಿದೆ. ಈ ಚಿತ್ರ ನಿರ್ಮಾಣಕ್ಕಾಗಿ ಕನ್ಯಾಕುಮಾರಿಯಲ್ಲಿ ಕೆಲವು ಮನೆಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಶೂಟಿಂಗ್ ಮುಗಿದ ನಂತರ ಸೆಟ್ ಗಳನ್ನು ಕೆಡವಲಾಗುತ್ತದೆ. ಆದರೆ ಸಮೀಪದಲ್ಲೇ ಇರುವ ನಿರಾಶ್ರಿತ ಮೀನುಗಾರರನ್ನು ಹುಡುಕಿ ಅವರಿಗೆ ಮನೆ ನೀಡಲು ಸೂರ್ಯ ನಿರ್ಧರಿಸಿದ್ದಾರೆ.
ಕಳೆದ ವರ್ಷವು ಕೂಡ ಸೂರ್ಯ ಕೆಲವರ್ಗದ ಮಕ್ಕಳ ಶಿಕ್ಷಣಕ್ಕಾಗಿ 1 ಕೋಟಿ ರೂ. ಹಣವನ್ನು ತಮಿಳುನಾಡು ಮುಖ್ಯಮಂತ್ರಿಗಳಿಗೆ ಖುದ್ದಾಗಿ ಹಸ್ತಾಂತರಿಸಿದರು.
ನಟರೆಂದರೆ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು ಎನ್ನುವ ಸಂದೇಶವನ್ನು ನೀಡುತ್ತಿರುವ ನಟ ಸೂರ್ಯ ಮಾದರಿ ನಟರಾಗಿದ್ದಾರೆ. ಕರ್ನಾಟಕದಲ್ಲಿ ಪುನೀತ್ ರಾಜ್ ಕುಮಾರ್ ಅವರು ಮಾಡಿದ ಸಮಾಜ ಸೇವೆಯಿಂದಾಗಿ ಅವರನ್ನು ಇಂದಿಗೂ ಜನರು ಹೃದಯದಲ್ಲಿಟ್ಟುಕೊಂಡಿದ್ದಾರೆ. ನಟನೆಯಲ್ಲಿ ಮಾತ್ರವೇ ಹೀರೋ ಆಗದೇ ನಿಜ ಜೀವನದಲ್ಲಿಯೂ ಹೀರೋ ಆಗಲು ಇನ್ನಷ್ಟು ನಟರು ಮುಂದಾಗಬೇಕು ಎನ್ನುವ ಆಶಯ ಇದೀಗ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯಡಿಯೂರಪ್ಪ ಎಷ್ಟು ಕಮಿಷನ್ ನೀಡಿದ್ದಾರೆ?: ದಿಂಗಾಲೇಶ್ವರ ಶ್ರೀಗೆ ಶಾಸಕ ಯತ್ನಾಳ್ ಪ್ರಶ್ನೆ
ಅನುಮತಿಯಿಲ್ಲದೆ ಧಾರ್ಮಿಕ ಮೆರವಣಿಗೆಗಳನ್ನು ನಡೆಸಲು ಅವಕಾಶವಿಲ್ಲ :ಯೋಗಿ ಆದಿತ್ಯನಾಥ್
ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!
ಕಾರು -ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಅಪ್ರಾಪ್ತ ದಲಿತ ಬಾಲಕನಿಂದ ಕಾಲು ನೆಕ್ಕಿಸಿದ ಠಾಕೂರರು!: ವಿಡಿಯೋ ವೈರಲ್