ಮಧ್ಯಪ್ರದೇಶ: 12 ಲಕ್ಷ ಎತ್ತುಗಳ ‘ವೃಷಣ ಬೀಜ’ ಒಡೆಯುವ ಯೋಜನೆಗೆ ಬಿಜೆಪಿ ಸಂಸದೆಯಿಂದಲೇ ವಿರೋಧ - Mahanayaka
8:05 AM Thursday 12 - December 2024

ಮಧ್ಯಪ್ರದೇಶ: 12 ಲಕ್ಷ ಎತ್ತುಗಳ ‘ವೃಷಣ ಬೀಜ’ ಒಡೆಯುವ ಯೋಜನೆಗೆ ಬಿಜೆಪಿ ಸಂಸದೆಯಿಂದಲೇ ವಿರೋಧ

sadhvi pragya
18/10/2021

ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 12 ಲಕ್ಷ ಎತ್ತುಗಳ ವೃಷಣ ಬೀಜ ಒಡೆಯುವ(ಸಂತಾನ ಹರಣ) ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಪಕ್ಷದ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ವಿರೋಧ ವ್ಯಕ್ತಪಡಿಸಿದ್ದು, ಸಂಸದೆಯ ನಿಲುವುನ್ನು ಕಾಂಗ್ರೆಸ್ ಕೂಡ ಬೆಂಬಲಿಸಿದೆ.

ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅನುತ್ಪಾದಕ ಮತ್ತು ಕಳಪೆ ಎತ್ತುಗಳ  ವೃಷಣ ಬೀಜ ಒಡೆಯಲು ನೀಡಿದ್ದ ಆದೇಶವನ್ನು ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಇನ್ನೂ ಈ ವಿವಾದದ ಬಗ್ಗೆ ಪಶು ತಜ್ಞರು ಬೇರೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಯೋಜನೆಯಿಂದ ದೇಶಿ ಗೋ ತಳಿಗೆ ಯಾವುದೇ ಅಪಾಯವಿಲ್ಲ. ಅನುತ್ಪಾದಕ ಮತ್ತು ಕಳಪೆ ಎತ್ತುಗಳಿಗೆ ಸಂತಾನ ಹರಣ ನಡೆಸದಿದ್ದರೆ,ಆರ್ಥಿಕತೆಗೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ ಅನುತ್ಪಾದಕ ಮತ್ತು ಕಳಪೆ ಎತ್ತುಗಳ ಸಂತಾನ ಹರಣ ಮಾಡುವ ಈ ಯೋಜನೆ ಇದೇ ಮೊದಲ ಬಾರಿಗೆ ಮಾಡಿರುವುದಲ್ಲ. 1998—99ರ ಬಳಿಕ 2021ರವರೆಗೆ 1.33 ಕೋಟಿ ಎತ್ತುಗಳ ಸಂತಾನ ಹರಣ ಮಾಡುವ ವೃಷಣ ಬೀಜ ಒಡೆಯುವ ಯೋಜನೆಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಆಡಳಿತದಲ್ಲಿ ನಡೆಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

Police Officer’s Car Runs Over 2 Girls At Jalandhar–Phagwara Highway

“ತ್ರಿಶೂಲ ಕೊಟ್ರೆ ಮೊದಲ ಬೇಟೆ ನೀನೇ” | ಮಾಜಿ ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ

ದೈತ್ಯ ಹೆಬ್ಬಾವನ್ನು ಕ್ರೇನ್ ನಲ್ಲಿ ಎತ್ತುತ್ತಿರುವ ವಿಡಿಯೋ ವೈರಲ್

ಜಾತಿನಿಂದನೆ ಪ್ರಕರಣ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

BigNews: ಆರೆಸ್ಸೆಸ್ ನ ಹಿರಿಯ ಮುಖಂಡನಿಂದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ

“ಬಸ್ಸಿನಲ್ಲಿ ಓಡಾಡುತ್ತಿದ್ದ ಬಜರಂಗದಳದ ಕಾರ್ಯಕರ್ತ ಸಿ.ಟಿ.ರವಿ ಕೋಟಿ ರವಿ ಆಗಿದ್ದು ಹೇಗೆ?”

ನಡು ಬೀದಿಯಲ್ಲಿ ತಲ್ವಾರ್ ಝಳಪಿಸುತ್ತಾ ಡಿಜೆಗೆ ಸ್ಟೆಪ್ ಹಾಕಿದ ಹಿಂದುತ್ವ ಕಾರ್ಯಕರ್ತರು!

ಇತ್ತೀಚಿನ ಸುದ್ದಿ